ಫ್ರಾನ್ಸಿಸ್ ಬುಕಾನಸ್, ಬ್ರಿಟಿಷ್ ನವರ ಈಸ್ಟ್ ಇಂಡಿಯಾ ಕಂಪನಿ ಸರ್ಕಾರದಲ್ಲಿದ್ದ ಒಬ್ಬ ವೈದ್ಯಾಧಿಕಾರಿ, ತಿದ್ದು ಪತನಾನಂತರ ವ್ಯಾಪ್ತಿಯಲ್ಲಿದ್ದ ಮೈಸೂರು, ಮಲಬಾರ್, ಪ್ರಾಂತ್ಯಗಳಲ್ಲಿನ ನೆಲ-ಜಲ-ಪ್ರಾಕೃತಿಕ ಸಂಪನ್ಮೂಲಗಳು ಖನಿಜಗಳು ಗಣಿಗಾರಿಕೆ ಕೈಗಾರಿಕೆ ವಾಣಿಜ್ಯ ವ್ಯವಹಾರ, ಆಡಳಿತ ವ್ಯವಸ್ಥೆ, ಅಲ್ಲಿರುವ ಜನ ಜಾತಿಗಳು-ಆಚರಣೆಗಳು-5 ಬೆಳ ಕೃಷಿಪದ್ಧತಿಗಳು- ದನಕರುಗಳ ತಳಿಗಳು ಹವಾಮಾನ ಪ್ರಾ ವಸ್ತುಗಳು, ಇತಿಹಾಸ ಮುಂತಾದ ಅನೇಕ ವಿಚಾರಗಳ ಬಗ್ಗೆ ನಿಖರವಾದ ಮಾಹಿತಿ ಕುರಿತು ಸರ್ವೇಕ್ಷಣಾ ವರದಿ ನೀಡಲು ಬುಕಾನನ್ನ್ನು ಕಂಪನಿ ಸರ್ಕಾರ 1800 ರಲ್ಲಿ ನಿಯೋಜಿಸಿತು. ಅವನು ಈ ಪ್ರದೇಶಗಳಲ್ಲಿ ಒಂದು ವರ್ಷ, ಎರಡು ತಿಂಗಳು, ಆರು ದಿನಗಳ ಕಾಲ ಸಂಚರಿಸಿ, ಸುಮಾರು 2000 ಪಟಗಳ ಸುದೀರ್ಘ ವರದಿಯನ್ನು ಸಲ್ಲಿಸಿದನು. ಅವನ ಮಹಾಪಯಣದ ದಿನಚರಿ ವರದಿ 200 ವರ್ಷದ ಕೆಳಗಿನ ಈ ಪ್ರದೇಶಗಳ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. ಈ ವರದಿ ಒಬ್ಬ ಸಮಾಜ ವಿಜ್ಞಾನಿಯ, ಇತಿಹಾಸಕಾರನ, ಸಸ್ಯ ವಿಜ್ಞಾನಿಯ, ಕುಲಶಾಸ್ತ್ರಜ್ಞನ, ತಳಿ ವಿಜ್ಞಾನಿಯ ಒಳನೋಟಗಳಿಂದ ಕೂಡಿದ ಅನೇಕ ಜ್ಞಾನ ಶಿಸ್ತುಗಳ ಸಂಗಮದಂತಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ವಿಶ್ವಕೋಶದಂತಿರುವ ಅವನ ವಿಕೃತ ಅಧ್ಯಯನಾತ್ಮಕ ಸಂಚಾರದ ವಿವರಗಳನ್ನು ಪ್ರೊ. ಎಂ.ಜಿ. ರಂಗಸ್ವಾಮಿಯವರು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅವರ ಅನುವಾದ ಹೃದ್ಯವಾಗಿದೆ. ಈಗಾಗಲೇ 'ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್” ಅನುವಾದಿಸಿ ಜನಮನಗಳನ್ನು ಮುಟ್ಟಿರುವ ಅವರ ಕಿರೀಟದಲ್ಲಿ 'ತುಮಕೂರು ಜಿಲ್ಲೆಯಲ್ಲಿ ಬುಕಾನನ್' ಮತ್ತೊಂದು ಗರಿಯಾಗಿದೆ. ಇದು ಇತಿಹಾಸಕಾರರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲೆಯ ಗತಕಾಲದ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲಿ ಜನಸಾಮಾನ್ಯರಿಗೂ ಆಕರ ಗ್ರಂಥವಾಗುವುದರಲ್ಲಿ ಸಂಶಯವಿಲ್ಲ ಮೀರಾಸಾಣಹಳ್ಳಿ ಶಿವಣ್ಣ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.