ತಮಿಳುನಾಡಿನ ಕನ್ನಡ ಮಂತ್ರಿ ಗೋವಿಂದ ದೀಕ್ಷಿತ

Author : ಕೆಳದಿ ಗುಂಡಾ ಜೋಯಿಸ್

Pages 194

₹ 150.00




Year of Publication: 2003
Published by: ಶ್ರೀ ಸರಸ್ವತಿ ಸೇವಾ ಸಮಿತಿ
Address: ಕೆಳದಿ ಪೋಸ್ಟ್, ತಾ,ಸಾಗರ ಶಿವಮೊಗ್ಗ ಜಿಲ್ಲೆ, ಕರ್ನಾಟಕ- 577401

Synopsys

ಕೆಳದಿ ಗುಂಡಾ ಜೋಯಿಸರು ಪತ್ತೆ ಮಾಡಿ ಸಂಪಾದಿಸಿರುವ ತಮಿಳುನಾಡಿನ ಕರ್ನಾಟಕ ಮಂತ್ರಿ ಗೋವಿಂದ ದೀಕ್ಷಿತ ಚರಿತ್ರೆ ಅಥವಾ ತಂಜಾವೂರು ನಾಯಕರ ಪ್ರಾಚೀನ ಇತಿಹಾಸದ ಸಾಕ್ಷಿಯಾಗಿದೆ.

ಗೋವಿಂದ ದೀಕ್ಷಿತರ ಬಗ್ಗೆ ಬರೆಯಲಿಕ್ಕೆ ಪ್ರೇರಣೆ-ಲೇಖಕರು ಗೋವಿಂದ ದೀಕ್ಷಿತರ ಸಂತತಿಗೆ ಸೇರಿದವರು ಎಂಬುದು. ಮೇಲಾಗಿ ಚೆನ್ನೈನಲ್ಲಿ ಗೋವಿಂದ ದೀಕ್ಷಿತರ ಬಗ್ಗೆ ಮಾಹಿತಿ ಸುಲಭವಾಗಿ ಸಿಗುತ್ತಿತ್ತು. ಇದೇ ಸಂತತಿಗೆ ಸೇರಿದವರು ಕಂಚೀ-ಕಾಮಕೋಟಿ-ಪೀಠದ ಪ್ರಸಿದ್ಧ ಜಗದ್ಗುರು ಶ್ರೀಚಂದ್ರಶೇಖರೇಂದ್ರ ಸರಸ್ವತೀ ಮಹಾ ಸ್ವಾಮಿಗಳು. ಈ ಸ್ವಾಮಿಗಳು ಮತ್ತು ಗೋವಿಂದ ದೀಕ್ಷಿತರು ತಮಿಳುನಾಡಿಗೆ ಕರ್ನಾಟಕದ ಅಮೂಲ್ಯ ಕೊಡುಗೆಗಳು. ಇವರಿಬ್ಬರಲ್ಲಿ ಒಂದು ವ್ಯತ್ಯಾಸ ಕಂಚೀ ಸ್ವಾಮಿಗಳು ನಮ್ಮ ಕಾಲದವರಾದ್ದರಿಂದಲೂ ಮತ್ತು ಅವರು ಕರ್ನಾಟಕದಲ್ಲಿ 1978ರಲ್ಲಿ ದೀರ್ಘಪ್ರಯಾಸ ಕೈಗೊಂಡರು. 1994ರಲ್ಲಿ ಮಹಾಸಮಾಧಿಸ್ತರಾದ್ದರಿಂದ ಅವರು ಈಗಿನ ಕರ್ನಾಟಕದವರಿಗೆ ಚಿರಪರಿಚಿತರು.

ಗೋವಿಂದ ದೀಕ್ಷಿತರ ಪೂರ್ವಜರು ತೀರ್ಥಹಳ್ಳಿಯವರೆಂದು ಹೇಳಲಾಗಿದೆ. ದೀಕ್ಷಿತರು ಕರ್ನಾಟಕದವರಾದರೂ ಕರ್ನಾಟಕಕ್ಕೆ ತಿರುಗಿ ಬರಲೇ ಇಲ್ಲ. ಅವರ ಕೆಲಸವೆಲ್ಲ ತಮಿಳುನಾಡಿನ ತಂಜಾವೂರು ಪ್ರಾಂತದಲ್ಲಿ ಮತ್ತು ಅವರ ಬಗ್ಗೆ ಕನ್ನಡದಲ್ಲಿ ಬರಹಗಳು ಇಲ್ಲವೇ ಇಲ್ಲ. ಅವರು ಜೀವಿಸಿದ ಕಾಲ 16ನೇ ಶತಮಾನದ ಉತ್ತರಾರ್ಧ ಮತ್ತು 17ನೇ ಶತಮಾನದ ಪೂರ್ವಾರ್ಧ. ಆದ್ದರಿಂದ ಈಗಿನ ಕನ್ನಡಿಗರಿಗೆ ಅವರು ಅಪರಿಚಿತರು. ಅವರ ಬದುಕಿನ ಕುರಿತು ಕೆಳದಿ ಗುಂಡಾಜೋಯಿಸರು ಈ ಕೃತಿಯನ್ನು ರಚಿಸಿದ್ದಾರೆ.

About the Author

ಕೆಳದಿ ಗುಂಡಾ ಜೋಯಿಸ್
(27 September 1931)

ಕೆಳದಿ ಗುಂಡಾ ಜೋಯಿಸ್ ಎಂದೇ ಖ್ಯಾತಿಯ ಇತಿಹಾಸತಜ್ಞರು. ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರು. ಹಳೆಯ ಕಾಲದ ಮೋಡಿಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಒಬ್ಬರು. ಗುಂಡಾಜೋಯಿಸರು 1931 ರ ಸೆಪ್ಟೆಂಬರ್ 27ರಂದು ಕೆಳದಿಯಲ್ಲಿ ಜನಿಸಿದರು. ತಾಯಿ ಮೂಕಾಂಬಿಕಾ, ತಂದೆ ನಂಜುಂಡ ಜೋಯಿಸರು. ಇವರ ಮೂಲ ಹೆಸರು ಲಕ್ಷ್ಮೀನಾರಾಯಣ. ಎರಡು ಮಕ್ಕಳು ತೀರಿಕೊಂಡಿದ್ದರಿಂದ ಇವರಾದರೂ ಕಲ್ಲುಗುಂಡಿನಂತೆ ಬದುಕಲಿ ಎಂದು ಅವರ ಅಜ್ಜಿ ಅವರಿಗೆ ’ಗುಂಡ’ ಎಂದು ಕರೆದಿದ್ದರಂತೆ. ಜೋಯಿಸರ ಪ್ರಾಥಮಿಕ ಶಿಕ್ಷಣ ಹುರಳಿ, ಕೆಳದಿ,ಸೊರಬ ಹಾಗೂ ಸಾಗರದಲ್ಲಿ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವು ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ ನಡೆಯಿತು. ...

READ MORE

Related Books