‘ಸ್ತ್ರೀದರ್ಪಣದಲ್ಲಿ ನಾಟ್ಯಶಾಸ್ತ್ರ’ ಡಾ. ಬಿ.ಎನ್. ಸುಮಿತ್ರಾಬಾಯಿ ಅವರ ಅಧ್ಯಯನಾತ್ಮಕ ಕೃತಿ. ಈ ಕೃತಿಗೆ ಹಿರಿಯ ಸಾಹಿತಿ ಡಾ.ಎಚ್.ಎಸ್. ಶಿವಪ್ರಕಾಶ್ ಹಾಗೂ ಖ್ಯಾತ ಕಾದಂಬರಿಕಾರ್ತಿ ವೈದೇಹಿ ಬೆನ್ನುಡಿ ಬರೆದಿದ್ದಾರೆ. ಇದು ನಾಟ್ಯಶಾಸ್ತ್ರದ ಅಧ್ಯಯನಕ್ಕೆ ಹೊಸಗಣ್ಣು ನೀಡುವ ಅಪರೂಪದ ಕೃತಿ ಎನ್ನುತ್ತಾರೆ ವೈದೇಹಿ. ಸ್ತ್ರೀವಿಶಿಷ್ಟ ದೃಷ್ಟಿಯಿಂದ ಗ್ರಹಿಕೆಗೆ ಸಿಲುಕುವ ಅನೇಕ ಒಳಾಂತರಗಳನ್ನಷ್ಟೇ ಅಲ್ಲ. ಒಬ್ಬ ಪ್ರಾಜ್ಞ ವಿದ್ವಾಂಸರಿಗೆ ಮಾತ್ರ ದರ್ಶನವಾಗುವ ಘನಸೂಕ್ಷ್ಮಗಳನ್ನೂ ಲೇಖಕಿ ಇಲ್ಲಿ ದಾಖಲಿಸಿದ್ದಾರೆ. ನವಚಿಂತನೆಯ ಮೂಸೆಯಲ್ಲಿ ಪರಿಶೀಲಿಸುತ್ತ ನಾಟ್ಯಶಾಸ್ತ್ರದ ಮರು ಓದಿಗೆ ಪ್ರೇರೇಪಣೆ ನೀಡಬಲ್ಲ ಈ ಕೃತಿ ತಂತಾನೇ ಒಂದು ವಿಶೇಷ ಮಹತ್ತಿಕೆಯ ಶೋಭೆ ಪಡೆದಿದೆ ಎಂದು ವೈದೇಹಿ ಅವರು ಮೆಚ್ಚುಗೆಯ ನುಡಿಗಳನ್ನು ಬರೆದಿದ್ದಾರೆ.
ಜೈನಶಾಸ್ತ್ರ ಮತ್ತು ಪ್ರಾಕೃತ ಪರಿಣಿತೆ ಆಗಿರುವ ಬಿ.ಎನ್. ಸುಮಿತ್ರಾಬಾಯಿ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಸಾರ್ವತ್ರಿಕದೆಡೆಗೆ, ವಿಚಯ, ಅಯನ, ಮಹಿಳೆ ಮತ್ತು ಸಾಹಿತ್ಯ, ಸರಹದ್ದುಗಳ ಆಚೆ, ಸ್ತ್ರೀವಾದಿ ಪ್ರವೇಶಿಕೆ ಅವರ ಪ್ರಮುಖ ವಿಮರ್ಶಾ ಕೃತಿಗಳು. ’ಕಲ್ಯಾಣ ಸರಸ್ವತಿ, ಕಾತ್ಯಾಯನಿ ವಾಚಿಕೆ, ಸ್ತ್ರೀವಾದಿ ಪ್ರವೇಶಿಕೆ’ ಕೃತಿಗಳನ್ನು ಸಂಪಾದಿಸಿದ್ದಾರೆ. ಅವರಿಗೆ ಅನುಪಮಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಡಾ. ಬಿ. ಎನ್. ಸುಮಿತ್ರಾ ಬಾಯಿ ಅವರ ಬೊಗಸೆಯಲ್ಲಿ ಹೊಳೆ ನೀರು (ಲೇಖನ ಸಂಕಲನ) ಕೃತಿಗೆ 2014ರ ವಿ.ಎಂ. ಇನಾಂದಾರ ಸ್ಮಾರಕ ವಿಮರ್ಶಾ ಪ್ರಶಸ್ತಿ ಸಂದಿದೆ ಹಾಗೂ ಪಿ. ...
READ MORE