ಲೇಖಕಿ ಪ್ರೊ. ಸಮತಾ ಬಿ. ದೇಶಮಾನೆ ಅವರು ರಚಿಸಿದ ಕೃತಿ-ಶ್ರೀ ಗುರುದೇವ ನಾರಾಯಣ ಗುರು. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಚಿಂತನೆಯೊಂದಿಗೆ ಜನಮನದಲ್ಲಿ ಗುರುವಿನ ಸ್ಥಾನ ಪಡೆದ ಶ್ರೀ ಗುರುದೇವ ನಾರಾಯಣ ಗುರುವಿನ ಜೀವನ ಚಿತ್ರಣ ನೀಡುವ ಕೃತಿ ಇದು. ಸಾಮಾಜಿಕ ಹಾಗೂ ಅಧ್ಯಾತ್ಮಿಕ ಚಳವಳಿಯ ಸಮಾಜ ಶಾಸ್ತ್ರೀಯ ಅಧ್ಯಯನದ ಈ ಕೃತಿಯು, ನಾರಾಯಣ ಗುರುಗಳ ಚಿಂತನೆಗಳನ್ನು ಆಳವಾಗಿ ಪ್ರತಿಪಾದಿಸುತ್ತವೆ. ಭಾರತದಂತಹ ಜಾತಿ ಶ್ರೇಣಿಕೃತ ಸಮಾಜದಲ್ಲಿ ಆರೋಗ್ಯಕರ ಮನಸ್ಸುಗಳನ್ನು ಬೆಳೆಸುವಲ್ಲಿ ಇವರ ಚಿಂತನೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದರ ಚರ್ಚೆಯ ವಿಸ್ತೃತ ರೂಪವೇ ಈ ಕೃತಿ.
©2024 Book Brahma Private Limited.