‘ಶಾಸನಶಾಸ್ತ್ರ’ ಕೃತಿಯು ಸಿ.ಪಿ.ಕೆ ಅವರ ಶಾಸನಗಳ ಆಧಾರಿತ ಅಧ್ಯಯನ ಕೃತಿಯಾಗಿದೆ. ಈ ಕೃತಿಯು ಅನೇಕ ಸತ್ಯಗಳನ್ನು ತೆರೆದಿಟ್ಟು ಊಹಾಪೋಹಗಳಿಗೆ ತೆರೆ ಎಳೆದು ಗೊಂದಲ ನಿವಾರಣೆ ಮಾಡುತ್ತದೆ. ಶಾಸನಗಳ ಅಧ್ಯಯನ ಇಂದು ಜನಪ್ರಿಯವಾಗಿದ್ದು ಹಿಂದೆ ಆಳಿದ ರಾಜರುಗಳು, ದಾನಿಗಳು, ವೀರರು-ತೂರರ ಪರಿಚಯವನ್ನು ಅದು ಮಾಡಿಕೊಡುತ್ತದೆ. ಲಿಪಿ ಬರುವ ಮೊದಲೇ ಇದು ರೂಢಿಯಲ್ಲಿತ್ತು ಯಾವುಯಾವುದೋ ಸಂಕೇತಗಳನ್ನು ಬಳಸಿ ನಿರ್ಮಿಸಿದ್ದ ಎಷ್ಟೋ ಶಾಸನಗಳನ್ನು ಇಂದು ಓದಲಾಗದೆ ಪರಿಣತ ಬುದ್ಧಿವಂತರಿಗಾಗಿ ಎದುರುನೋಡುವುದು ಅನಿವಾರ್ಯವಾಗಿದೆ. ಇಂದಿನ ಪ್ರಸ್ತಕಗಳು ನೀಡುವಷ್ಟು ಸಮೃದ್ಧ ಮಾಹಿತಿಯನ್ನೆಂದಿಗೂ ಶಾಸನಗಳು ನೀಡಲಾರವು, ಅವನ್ನು ಓದಿ ತಮ್ಮ ಬುದ್ಧಿಗೆ ನಿಲುಕುವಷ್ಟು ಮಾತ್ರ ಅಂದಾಜಿಸಬಹುದು. ಅದೂ ಒಂದೇ ಶಾಸನವನ್ನು ಹೆಚ್ಚು ಪಂಡಿತರು ಓದಿದಾಗ ಯಾವುದೇ ನಿರ್ಧಾರಕ್ಕೆ ಬರದೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು – ಹೀಗೆ ಶಾಸನಶಾಸ್ತ್ರದ ಬಗ್ಗೆ ವಿವರವಾಗಿ ಇಲ್ಲಿ ಒಂದು ಅಧ್ಯಯನವನ್ನೇ ಮಾಡಲಾಗಿದೆ
(ಹೊಸತು, ಮೇ 2012, ಪುಸ್ತಕದ ಪರಿಚಯ)
ತಮ್ಮ ಇರುವಿಕೆಯನ್ನು, ಸಾಧನೆಗಳನ್ನು ಮುಂದಿನ ಜನಾಂಗವೂ ತಿಳಿಯಲಿ ಎಂಬ ಕಾರಣದಿಂದ ಶಾಶ್ವತವಾಗಿ ಬಹುಕಾಲ ಬಾಳುವಂಥ ಕಲ್ಲು - ತಾಮ್ರ - ಇತರ ಲೋಹಗಳಲ್ಲಿ ಕೊರೆದು ಇಡುತ್ತಿದ್ದರು. ಇದೇ ಶಾಸನ ದೀರ್ಘಕಾಲ ಬಾಳಿ ಹಿಂದೆ ನಡೆದದ್ದನ್ನು ತಿಳಿಸುವ ಒಂದು ಸಾಧನ. ಇದು ಅನೇಕ ಸತ್ಯಗಳನ್ನು ತೆರೆದಿಟ್ಟು ಊಹಾಪೋಹಗಳಿಗೆ ತೆರೆ ಎಳೆದು ಗೊಂದಲ ನಿವಾರಣೆ ಮಾಡುತ್ತದೆ. ಶಾಸನಗಳ ಅಧ್ಯಯನ ಇಂದು ಜನಪ್ರಿಯವಾಗಿದ್ದು ಹಿಂದೆ ಆಳಿದ ರಾಜರುಗಳು, ದಾನಿಗಳು, ವೀರರು-ತೂರರ ಪರಿಚಯವನ್ನು ಅದು ಮಾಡಿಕೊಡುತ್ತದೆ. ಲಿಪಿ ಬರುವ ಮೊದಲೇ ಇದು ರೂಢಿಯಲ್ಲಿತ್ತು ಯಾವುಯಾವುದೋ ಸಂಕೇತಗಳನ್ನು ಬಳಸಿ ನಿರ್ಮಿಸಿದ್ದ ಎಷ್ಟೋ ಶಾಸನಗಳನ್ನು ಇಂದು ಓದಲಾಗದೆ ಪರಿಣತ ಬುದ್ಧಿವಂತರಿಗಾಗಿ ಎದುರುನೋಡುವುದು ಅನಿವಾರ್ಯವಾಗಿದೆ. ಇಂದಿನ ಪ್ರಸ್ತಕಗಳು ನೀಡುವಷ್ಟು ಸಮೃದ್ಧ ಮಾಹಿತಿಯನ್ನೆಂದಿಗೂ ಶಾಸನಗಳು ನೀಡಲಾರವು, ಅವನ್ನು ಓದಿ ತಮ್ಮ ಬುದ್ಧಿಗೆ ನಿಲುಕುವಷ್ಟು ಮಾತ್ರ ಅಂದಾಜಿಸಬಹುದು. ಅದೂ ಒಂದೇ ಶಾಸನವನ್ನು ಹೆಚ್ಚು ಪಂಡಿತರು ಓದಿದಾಗ ಯಾವುದೇ ನಿರ್ಧಾರಕ್ಕೆ ಬರದೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು – ಹೀಗೆ ಶಾಸನಶಾಸ್ತ್ರದ ಬಗ್ಗೆ ವಿವರವಾಗಿ ಇಲ್ಲಿ ಒಂದು ಅಧ್ಯಯನವನ್ನೇ ಮಾಡಲಾಗಿದೆ ಎಂದರೂ ತಪ್ಪಲ್ಲ ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಇದೊಂದು ಆಕರಗ್ರಂಥವಾಗಿದ್ದು ಕೈಪಿಡಿಯಂತೆ ಮಾರ್ಗದರ್ಶನ ನೀಡಬಲ್ಲದು.
©2024 Book Brahma Private Limited.