ಶಾಸನಗಳನ್ನು ಇತಿಹಾಸದ ಅಧ್ಯಯನಕ್ಕೆ ಆಕರಗಳಾಗಿ ಬಳಸಿಕೊಳ್ಳುವುದುಮೊದಲಿನಿಂದಲೂ ನಡೆದುಬಂದಿರುವ ಪದ್ಧತಿ. ನಂತರ ಶಾಸನಗಳು ಸಂಸ್ಕೃತಿ ಮತ್ತು ಭಾಷೆಯ ಅಧ್ಯಯನಕ್ಕೂ ಮಹತ್ವವನ್ನು ದೊರಕಿಸಿಕೊಟ್ಟಿವೆ. ಈ ನಿಟ್ಟಿನಲ್ಲಿ ಕವಿರಾಜಮಾರ್ಗಕ್ಕೆ ಮೊದಲಿನ ಭಾಷೆಯ ವಿಚಾರವಾಗಿ ತಿಳಿಯಲು ಶಾಸನಗಳೇ ಪ್ರಮುಖ ಆಕರಗಳು. 'ಮೈಸೂರು ಒಡೆಯರ ಆಳ್ವಿಕೆಯಲ್ಲೂ ಶಾಸನಗಳ ಮೂಲಕ ಹಲವು ವಿಚಾರಗಳು ತಿಳಿದಿವೆ. ಆದ್ದರಿಂದ ಭಾಷೆಯ ಬದಲಾದ ಸ್ವರೂಪವನ್ನು ತಿಳಿಯಲು ಶಾಸನಗಳು ನೆರವಿಗೆ ಬರುತ್ತವೆಂಬ ಕಾರಣದಿಂದ, ಆ ಕುರಿತು, ಗೋಪಾಲ ರಾವ್ ಅವರು ಮಾಡಿದ್ದ ಕೆಲವು ಭಾಷಣಗಳು ಮತ್ತು ಬರೆದಿದ್ದ ಲೇಖನಗಳನ್ನು ಒಟ್ಟುಗೂಡಿಸಿ ಶಾಸನ ಅಧ್ಯಯನ ಕೃತಿಯನ್ನು ಓದುಗರ ಮುಂದಿಟ್ಟಿದ್ದಾರೆ.
©2024 Book Brahma Private Limited.