`ಸಂಶೋಧನ ಸಂಭಾವನೆ’ ಲೇಖಕ ಎಸ್. ಕಾರ್ತಿಕ್ ಅವರ ಸಂಶೋಧನಾತ್ಮಕ ಲೇಖನಗಳಿರುವ ಕೃತಿ. ಇತಿಹಾಸ, ಸಂಶೋಧನೆ, ವಿಮರ್ಶೆ ಮತ್ತು ವ್ಯಕ್ತಿಚಿತ್ರ ಸಂಬಂಧೀ ಬರಹಗಳು ಇಲ್ಳಲಿ ಸಂಕಲನಗೊಂಡಿವೆ. ಪ್ರಾಚೀನ ಕನ್ನಡ ಅಧ್ಯಯನ ಆಸಕ್ತರಿಗೆ ಈ ಕೃತಿಯು ಉತ್ತಮ ಆಕರ ಗ್ರಂಥವಾಗಲಿದೆ.
ಎಸ್. ಕಾರ್ತಿಕ್ ಬೆಂಗಳೂರಿನವರು. ತಂದೆ ಕೆ. ಸತ್ಯನಾರಾಯಣ, ತಾಯಿ ಕೆ.ಎಸ್. ಕಾಂತಮ್ಮ. ಸಂಶೋಧನೆಯ ವಿಷಯಗಳು: ವ್ಯಾಕರಣ, ಛಂದಸ್ಸು, ಅಲಂಕಾರ, ನಿಘಂಟು, ಜ್ಯೌತಿಷ, ಸಂಗೀತ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ, ಪುರಾತತ್ತ್ವ, ಹಸ್ತಪ್ರತಿಶಾಸ್ತ್ರ, ಭಾಷಾಶಾಸ್ತ್ರ, ಭಾರತೀಯ ಕಾಲಗಣನೆ ಇತ್ಯಾದಿ ಕ್ಷೇತ್ರಗಳಲ್ಲಿ ಆಸಕ್ತರು. ಕನ್ನಡ, ಸಂಸ್ಕೃತ, ತೆಲುಗು, ಹಿಂದಿ ಭಾಷಾ ಪರಿಣಿತರು. ಕೃತಿಗಳು : ಪದಾರ್ಥ ಸಂಪದ, ಕೆಲವು ಕನ್ನಡ ನಿಘಂಟುಗಳು, ಸಂಶೋಧನ ಸಂಭಾನೆ, ಸಂಗೀತಶಾಸ್ತ್ರ ಚಂದ್ರಿಕೆ. ಸುಮಾರು 150ಕ್ಕೂ ಹೆಚ್ಚು ಲೇಖನಗಳು ವಿವಿಧ ನಿಯತಕಾಲಿಕೆಗಳಲ್ಲಿ, ಅಭಿನಂದನಗ್ರಂಥಗಳಲ್ಲಿ ಪ್ರಕಟವಾಗಿವೆ. ಅರಳು ಸಾಹಿತ್ಯ ದತ್ತಿ ಪ್ರಶಸ್ತಿ, ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ‘ಕಾರ್ಯ ಶಿಬಿರ’ಗಳಲ್ಲಿ ...
READ MORE