ಲೇಖಕ ಡಾ. ತಿಪ್ಪೇರುದ್ರ ಸಂಡೂರು ಅವರು ಸಂಶೋಧನೆ, ವಿಮರ್ಶೆ, ನಿಘಂಟುಶಾಸ್ತ್ರದ ಕುರಿತು ಬರೆದ ಲೇಖನಗಳ ಸಂಗ್ರಹ ಕೃತಿ-ಸಾಹಿತ್ಯ ಸುರಭಿ. ಉಸ್ಮಾನಿಯಾ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಲಿಂಗಪ್ಪ ಗೋನಾಲ ಅವರು ಬೆನ್ನುಡಿ ಬರೆದು ‘ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯ ಕೃತಿಗಳ ವಸ್ತು-ವಿಷಯ ಶೋಧದ ಕೆಲವು ಹಾಗೂ ಸಂಕೀರ್ಣ ವಸ್ತು ವಿಷಯವುಳ್ಳ ಕೆಲವು ಲೇಖನಗಳಿವೆ. ಸರಳವಾದ ಭಾಷೆ, ದ್ವಂದ್ವರಹಿತವಾದ ನಿರೂಪನಾ ಕ್ರಮ, ತರ್ಕಬದ್ಧವಾದ ವಿವೇಚನೆ ವಿಶ್ಲೇಷಣೆಗಳಿಂದ ಇಲ್ಲಿಯ ಬರಹಗಳು ಮೌಲಿಕವಾಗಿವೆʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ,
ಲೇಖಕ ಡಾ. ತಿಪ್ಪೇರುದ್ರ ಸಂಡೂರು ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಬಳ್ಳಾರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು. ಲೇಖನ, ವಿಮರ್ಶೆ, ಕವನ ರಚನೆ, ಸಂಶೋಧನೆ, ನಿಘಂಟುಶಾಸ್ತ್ರ, ಸಂಪಾದನೆ ಕಾರ್ಯದಲ್ಲಿ ನಿರತರು. ಕನ್ನಡ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವೀಧರರು. ಕೃತಿಗಳು : ಸಾಹಿತ್ಯ ಸುರಭಿ ( ಸಂಶೋಧನಾ ಲೇಖನಗಳು ) ...
READ MORE