ಪ್ರಾಚೀನ ಕರ್ನಾಟಕದ ಮಹಿಳಾಲೋಕ

Author : ಸಂಧ್ಯಾ ವಿ

Pages 280

₹ 299.00




Year of Publication: 2022
Published by: ಕದಂಬಪ್ರಕಾಶನ
Address: ಕುಮಾರಸ್ವಾಮಿ ಲೇಔಟ್‌ 1ನೇ ಹಂತ ಬೆಂಗಳೂರು

Synopsys

ಸಂಧ್ಯಾ ಅವರು ಅಂತಹ ಕಾಲದ ಸ್ತ್ರೀಯರು ಹೇಗೆ ಬಾಳಿ- ಬದುಕಿದರೆಂಬ ಬಗ್ಗೆ ಪ್ರಾಚೀನ ಕರ್ನಾಟಕದ ಮಹಿಳಾಲೋಕ ಕೃತಿಯಲ್ಲಿ ತೋರಿಸಲು ಶ್ರಮಿಸಿದ್ದಾರೆ. ಇದರಲ್ಲಿಯೂ ಚೆನ್ನಾಗಿ ಆಡಳಿತ ನಡೆಸಿದ ರಾಜಕೀಯದಲ್ಲಿದ್ದ ಸ್ತ್ರೀಯರ ಉಲ್ಲೇಖವೇ ಹೆಚ್ಚಾಗಿದೆ. ಮಕ್ಕಳಿಲ್ಲದೆ ರಾಜ ಸತ್ತಾಗ ರಾಜ್ಯದ ಜವಾಬ್ದಾರಿ ಹೊತ್ತ ಮಹಿಳೆಯರು ಅಸ್ತಿತ್ವವನ್ನು ಉಳಿಸಲು ಪಟ್ಟ ಕಷ್ಟ-ನಷ್ಟಗಳನ್ನು, ಕರ್ನಾಟಕದಲ್ಲಿ ರಾಣಿಯರ ದತ್ತಕಗಳು ಅಧ್ಯಾಯದಲ್ಲಿ ವಿವರಿಸಿದ್ದಾರೆ. ಹಾಗೆಯೇ ಪೆಣ್ಣುಯ್ಯಲ್, ಸಂಗೀತ-ನೃತ್ಯಕಲೆಗಳಿಗೆ ಪ್ರಾಚೀನ ಅರಸಿಯರ ಕೊಡುಗೆ, ಮಹಿಳೆಯರ ಸಾಹಸ, ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮೊದಲಾದ ಅಧ್ಯಾಯಗಳಲ್ಲಿ ಮಹಿಳೆಯರು ತಮ್ಮನ್ನು ಹೇಗೆ ತೊಡಗಿಸಿಕೊಂಡಿದ್ದರೆಂಬ ಬಗ್ಗೆ ವಿವರಿಸಿದ್ದಾರೆ. ಹೆಚ್ಚಿಗೆ ಶಾಸನಗಳನ್ನಾಧರಿಸಿ ಬರೆದಿರುವ ಈ ಲೇಖನಗಳ ಗುಚ್ಛ ಒಂದು ಅಧಿಕೃತ ಕೃತಿಯಾಗಿದೆ. ಇಲ್ಲಿ ಊಹಾ ಪೋಹಗಳಾಗಲೀ, ಕಲ್ಪಿತ ವಿಷಯಗಳಿಗಾಗಲೀ ಸ್ಥಳವಿಲ್ಲ. ಹೀಗಾಗಿ ಪ್ರಾಚೀನ ಕರ್ನಾಟಕದ ಮಹಿಳೆಯರ ಬಗ್ಗೆ ತಿಳಿದುಕೊಳ್ಳಲು ಇದೊಂದು ಅಧಿಕೃತ ಮಾಹಿತಿಯುಳ್ಳ ಗ್ರಂಥ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

About the Author

ಸಂಧ್ಯಾ ವಿ

ಹನ್ನೆರಡು ವರ್ಷಗಳಿಂದ ಬೋಧಕ ವೃತ್ತಿಯಲ್ಲಿ ತೊಡಗಿರುವ ಸಂಧ್ಯಾ.ವಿ ಅವರು ಪ್ರಸ್ತುತ ದಯಾನಂದಸಾಗರ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಇವರು ಕರ್ನಾಟಕ ಇತಿಹಾಸ ಅಕಾದೆಮಿಯ ಕಾರ್ಯದರ್ಶಿಯಾಗಿ ಏಳು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ʼಇತಿಹಾಸ ದರ್ಶನʼದ ಸಂಪಾದಕರಾಗಿದ್ದಾರೆ. ನಾಡಿನಾದ್ಯಂತ ಹಲವಾರು ಸಂಸ್ಥೆ, ವಿಶ್ವವಿದ್ಯಾಲಯ, ಕಾಲೇಜುಗಳು ಏರ್ಪಡಿಸಿದ್ದ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ ಸುಮಾರು 50 ಸಂಶೋಧನ ಪತ್ರಿಕೆಗಳನ್ನು ಮಂಡಿಸಿದ್ದಾರೆ. ಕೃತಿಗಳು: ಕುಮಾರವ್ಯಾಸನ ವಿರಾಟ ಪರ್ವದ ವಿವಿಧ ಆವೃತ್ತಿಗಳು, ಪ್ರಾಚೀನ ಕರ್ನಾಟಕದ ಮಹಿಳಾಲೋಕ   ...

READ MORE

Related Books