ಎ. ಎಲ್. ಬಾಶಮ್ ಅವರ ಆಂಗ್ಲ ಕೃತಿ-ಪ್ರಾಚೀನ ಭಾರತವೆಂಬ ಅದ್ಭುತ’. (ಮುಸಲ್ಮಾನರು ಆಗಮನಕ್ಕೆ ಮುಂಚಿನ ಭಾರತೀಯ ಉಪಖಂಡದ ಇತಿಹಾಸ ಮತ್ತು ಸಂಸ್ಕೃತಿಯ ಒಂದು ಸಮೀಕ್ಷೆ)` (The wonder That Was India) ಲೇಖಕ ಡಿ.ಆರ್. ಮಿರ್ಜಿ ಅವರು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈಗಾಗಲೇ ಅನೇಕ ಭಾರತೀಯ ಭಾಷೆಗಳಿಗೆ ಈ ಕೃತಿ ಅನುವಾದಗೊಂಡಿದೆ. ಭಾರತದ ಪ್ರಾಚೀನ ಸಂಸ್ಕೃತಿಯ ಮೇಲಣ ವಿಶ್ವಕೋಶದಂತಿದೆ. ಸ್ವತಃ ಭಾರತೀಯರಾದ ನಮಗೇ ಗೊತ್ತಿರದ ಅನೇಕ ಸೂಕ್ಷ್ಮ ವಿವರಗಳನ್ನು ಈ ಪುಸ್ತಕದಲ್ಲಿ ಕಾಣಬಹುದು. ನಮ್ಮ ಆನೇಕ ಆಚರಣೆ, ಮಂತ್ರಗಳ ಹಿಂದಿರುವ ಭಾವ, ಅವುಗಳ ಮಹತ್ವವನ್ನು ಕುರಿತು ಈ ಪುಸ್ತಕ ಮನೋಜ್ಞವಾಗಿ ವ್ಯಾಖ್ಯಾನಿಸುತ್ತದೆ. ನಮ್ಮ ವಿವಿಧ ಕಲೆಗಳು ಮತ್ತು ಸಾಹಿತ್ಯಕ ವೈಭವದ ಮೇಲೂ ಬೆಳಕು ಚೆಲ್ಲುತ್ತದೆ. ಸಮಗ್ರ ಅಧಿಕಾರಯುತ ಮಾಹಿತಿಯನ್ನೊಳಗೊಂಡ ಪುಸ್ತಕದ ಉಪಯುಕ್ತತೆಯನ್ನು ಹೆಚ್ಚಿಸಲು ಸುಮಾರು ಒಂದು ನೂರು ಚಿತ್ರಗಳನ್ನೂ ಒಳಗೊಂಡಿದೆ.
©2024 Book Brahma Private Limited.