ಹಳಗನ್ನಡದ ಚಂಪೂಕಾವ್ಯ ಸಂದರ್ಭದಲ್ಲಿ 'ಅಭಿನವ ಪಂಪ' ಖ್ಯಾತಿಯನ್ನು ಪಡೆದ ಕವಿ 'ನಾಗಚಂದ್ರ'ನ 'ಪಂಪ ರಾಮಾಯಣಂ' ಖ್ಯಾತಿಯ "ರಾಮಚಂದ್ರಚರಿತ ಪುರಾಣಂ'ನ ಗದ್ಯಾನುವಾದದೊಂದಿಗೆ ಜೈನಧರ್ಮದ ತತ್ತ್ವಜ್ಞಾನದ ಓದಿನ ಹರಹಿನಲ್ಲಿ ಸತ್ತ್ವಪೂರಿತ ಚಿಂತನೆಯನ್ನು ಬಿತ್ತರಿಸಿದ ವಿಶೇಷ ಕೃತಿ. ಲೇಖಕರೆ ಹೇಳಿದಂತೆ 'ಕಾವ್ಯದ ಕಥನವೂ ಅನುಭವಿಸಬಹುದಾದ ಚಿಂತನವೂ ಎರಕವಾದುದರಿಂದ ಇದು ಕಾವ್ಯ ಕಥನಂ-ಸೇವ್ಯ ಚಿಂತನಂ' ಆಗಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆಯುವಾಗ ಹಿರಿಯ ವಿಮರ್ಶಕರಾದ ಡಾ.ಕೆ.ಕೇಶವಶರ್ಮಾ ಅವರು 'ಅಧ್ಯಯನಶೀಲ ಮನಸ್ಸುಗಳಿಗೆ ಇದೊಂದು 'ಪರಾಮರ್ಶನ ಗ್ರಂಥ' ಎಂದಿದ್ದಾರೆ.
©2025 Book Brahma Private Limited.