‘ನಡುಗನ್ನಡ ಸಾಹಿತ್ಯ: ದೇಸಿ ಚಿಂತನೆಯ ನೆಲೆಗಳು’ ಲೇಖಕ ಡಾ.ಡಿ.ಕೆ. ಚಿತ್ತಯ್ಯ ಪೂಜಾರ್ ಅವರ ಕೃತಿ. ಈ ಕೃತಿಗೆ ಡಾ.ಕರೀಗೌಡ ಬೀಚನಹಳ್ಳಿ ಹಾಗೂ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರೆದಿದ್ದಾರೆ. ‘ಕನ್ನಡ ಸಾಹಿತ್ಯ, ಸಂಸ್ಕೃತಿ, ಚರಿತ್ರೆಯಲ್ಲಿ ಮಧ್ಯಕಾಲೀನ ಸಂದರ್ಭದಲ್ಲಿ ಸೃಷ್ಟಿಯಾದ ಕನ್ನಡ ಸಾಹಿತ್ಯಿಕ ರಚನೆಗಳಿಗೆ ತನ್ನದೇ ಆದ ಅನನ್ಯತೆ ಇದೆ. ಹಾಗಾಗಿ ನಡುಗನ್ನಡ ಸಾಹಿತ್ಯ ದೇಸಿ ಚಿಂತನೆಯ ನೆಲೆಗಳು ಎನ್ನುವ ಈ ಕೃತಿ ಅದರ ಪ್ರತಿಬಿಂಬದಂತಿದೆ. ಈ ಕೃತಿಯಲ್ಲಿ ಸುಮಾರು ಮುವತ್ತೈದು ಲೇಖನಗಳಿದ್ದು ವಚನ, ರಗಳೆ, ಷಟ್ಪದಿ, ಸಾಂಗತ್ಯ, ಕೀರ್ತನೆ, ತತ್ವಪದ, ಜನಪದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡ ಮನುಷ್ಯನ ಬದುಕಿನ ವಿವಿಧ ನೆಲೆಗಳನ್ನು ಗಂಭೀರವಾಗಿ ರಚಿಸಲಾಗಿದೆ’ ಎನ್ನುತ್ತಾರೆ ಡಾ. ಕರೀಗೌಡ ಬೀಚನಹಳ್ಳಿ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿನ ಮಧ್ಯಕಾಲೀನ ಯುಗದ ಸಾಹಿತ್ಯ ಮಾರ್ಗ ಪರಂಪರೆಗಿಂತ ಭಿನ್ನವಾದ ಅನೇಕ ದೇಸೀ ಅಭಿವ್ಯಕ್ತಿಗಳ ಅಮೂಲ್ಯ ಅನನ್ಯ ಕಾಲಘಟ್ಟ: ಬಹುಮುಖಿ ಚಿಂತನೆಗಳ ದೇಸಿ ಪ್ರಯೋಗಶಾಲೆ ಕನ್ನಡ ಸಾಹಿತ್ಯವನ್ನು ಹೊಸ ನಿಟ್ಟಿನಲ್ಲಿ ನೋಡುವ, ಚಿಂತಿಸುವ ವ್ಯಾಖ್ಯಾನಿಸುವ ಅನೇಕ ಪ್ರಕತ್ನಗಳು ಈ ಕೃತಿಯಲ್ಲಿವೆ.
©2024 Book Brahma Private Limited.