ಕೆ.ತಿಮ್ಮಯ್ಯ ಅವರ ಈ ಕೃತಿಗೆ ಕಾಡುಗೊಲ್ಲ 'ಮೂರು ಕುಲ ಮುನ್ನೂರು ಸಾವಿರ ಬಳಗ' ಎಂದು ಶೀರ್ಷಿಕೆ ನೀಡಲಾಗಿದೆ. ಕಾರಣವೆಂದರೆ ಇಲ್ಲಿ ಕಾಡುಗೊಲ್ಲ ಸಮುದಾಯದ ಮೂರುಕುಲ, ಮುನ್ನೂರು ಸಾವಿರ ಬಳಗ, ಮೂರುಕಟೆಮನೆ ಇವುಗಳಿಗೆ ಒಳಪಟ್ಟ ಕುಲ, ಬೆಡಗುಗಳ ಬಗೆ ಅತ್ಯಂತ ವಿಸ್ತಾರವಾದ ಅಧ್ಯಯನ ನಡೆಸಲಾಗಿದೆ. ಒಂದೊಂದು ಕುಲ ಹಾಗೂ ಅದು ಒಳಗೊಂಡ ಬೆಡಗು ಉಪಬೆಡಗುಗಳು ಹಾಗೂ ಬೆಡಗುಗಳು ಉಂಟಾದ ಬಗೆ ಒಂದೊಂದು ಕುಲ-ಬೆಡಗುಗಳ ನಡುವಿನ ನೆಂಟತನ. ಅಣ್ಣಮ್ಮತನ, ಹೊಕ್ಕುಬಳಕೆ ಮುಂತಾದುವನ್ನು ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ.
©2024 Book Brahma Private Limited.