ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-7

Author : ಷ. ಶೆಟ್ಟರ್‌

Pages 416

₹ 320.00




Year of Publication: 2022
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040
Phone: 9448804905

Synopsys

‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-7’ ಕೃತಿಯು ಷ. ಶೆಟ್ಟರ್ ಅವರ 2020 ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ ಸಾ.ಶ.ಸು 1000 ಕೃತಿಯಾಗಿದೆ. ಹಳಗನ್ನಡ ಪಠ್ಯದ ಪೂರ್ಣ ಭಾಷಾಂತರವನ್ನು ಆಧುನಿಕ ಕನ್ನಡದಲ್ಲಿ ಕೊಡಲಾಗಿದೆ. ಶಾಸನ ಪಠ್ಯವನ್ನು ಮೊದಲು ಪ್ರಕಟಿಸಿದಂತೆ ಇಲ್ಲಿಯೂ ಆಧುನಿಕ ಕನ್ನಡ ಲಿಪಿಯಲ್ಲಿ ಪ್ರಕಟಿಸಲಾಗಿದೆ. ಆದರೆ ಕೆಲವು ಶಾಸನಗಳಿಗೆ ಮಾತ್ರ ಅಲ್ಲಿ ಒದಗಿಸಲಾಗಿದ್ದ ಪ್ರತಿಕೃತಿಯನ್ನಾಗಲೀ ಇಲ್ಲಿ ಒದಗಿಸಿಲ್ಲ. ಶಾಸನವು ದ್ವಿಭಾಷಾ ಅಥವಾ ತ್ರಿಭಾಷಾ ಬರಹಗಳಲ್ಲಿದ್ದರೆ, ಹಳಗನ್ನಡದ ಭಾಗವನ್ನು ಮಾತ್ರ ಆಯ್ದುಕೊಡಲಾಗಿದೆ, ಇನ್ನುಳಿದ ಭಾಷೆಗಳಲ್ಲಿರುವ ಪಠ್ಯಭಾಗವನ್ನಲ್ಲ. ಪ್ರತಿಪದದ ಅರ್ಥವನ್ನೂ ಮತ್ತು ಶಾಸನದ ಭಾಷಾಂತರವನ್ನೂ ಆಧುನಿಕ ಕನ್ನಡದಲ್ಲಿ ಒದಗಿಸಿರುವುದು ಈ ನಿಯತಕಾಲಿಕೆಗಳಲ್ಲಿ, ಪ್ರಕಟವಾಗಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಳಗನ್ನಡ ಶಾಸನಗಳನ್ನು ಶೋಧಿಸಿ, ಸಂಗ್ರಹಿಸಿ, ಕಾಲಾನುಕ್ರಮದಲ್ಲಿ ಮಾಲಿಕೆಯ ವಿಶೇಷತೆ, ದೇಶದ ಯಾವ ಭಾಷೆಯ ಶಾಸನಾಧ್ಯಯನದಲ್ಲಿ ಈವರೆಗೂ ಮಾಡದಿರುವ ಸಾಧನೆ ಇದಾಗಿದೆ ಎನ್ನುತ್ತಾರೆ ಲೇಖಕ ಷ. ಶೆಟ್ಟರ್.

ಅಲ್ಲದೆ, ಒಂದೊಂದು ಕಾಲಘಟ್ಟದಲ್ಲಿ ಬಳಕೆಗೆ ಬಂದ ಕನ್ನಡ ಪದಗಳ ಸಮಗ್ರ ಯಾದಿಯನ್ನು ಪ್ರತಿ ಸಂಪುಟದ ಕೊನೆಯಲ್ಲಿ ಅನುಬಂಧಿಸಿ, ಅವು ಕನ್ನಡ ಮೂಲದವುಗಳೋ, ಸಂಸ್ಕೃತ ಮೂಲದವುಗಳೋ, ಮಿಶ್ರಭಾಷಾ ಪದಗಳೋ, ಎಂಬುದನ್ನು ಸೂಚಿಸಲಾಗಿದೆ. ಮೊದಲ ಸಹಸ್ರಮಾನದ ಗ್ರಾಮನಾಮಗಳನ್ನು, ವ್ಯಕ್ತಿನಾಮಗಳನ್ನು, ಸಂಸ್ಥೆ ಮತ್ತು ಸಾಮಾಜಿಕ ಘಟಕಗಳನ್ನು, ಧರ್ಮಸಂಸ್ಥೆಗಳನ್ನು, ಅರಸರನ್ನು, ಆಡಳಿತ ಘಟಕಗಳನ್ನು, ಧರ್ಮಸಂಪ್ರದಾಯಗಳನ್ನು, ಈ ಬಗೆಯ ಇನ್ನೂ ಹತ್ತಾರು ನ ಸಂಗತಿಗಳ ವಿಷಯಗಳನ್ನು ಕ್ಷಣಮಾತ್ರದಲ್ಲಿ ಗುರುತಿಸುವ ಅನುಕೂಲತೆಯನ್ನು ಸಂಶೋಧಕರು ಇನ್ನು ಮುಂದೆ ಈ ಸಂಪುಟಗಳಿಂದ ಪಡೆದುಕೊಳ್ಳಬಹುದಾಗಿದೆ.

 

About the Author

ಷ. ಶೆಟ್ಟರ್‌
(11 December 1935)

ಷ.ಶೆಟ್ಟರ್ ಅವರು ಹುಟ್ಟಿದ್ದು 11 ಡಿಸೆಂಬರ್ 1935 ರಂದು. ಊರು ಬಳ್ಳಾರಿ ಜಿಲ್ಲೆಯ ಹಂಪಸಾಗರ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ಗಳಲ್ಲಿ ಉನ್ನತ ವ್ಯಾಸಂಗ, ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ. 1960 -96, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978-95, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ-1996-99, ಬೆಂಗಳೂರಿನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ 2002-2010, ...

READ MORE

Related Books