‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-5’ ಕೃತಿಯು ಷ. ಶೆಟ್ಟರ್ ಅವರ 2020- ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ ಸಾ.ಶ.ಸು `964-995’ ಕೃತಿಯಾಗಿದೆ. ಪ್ರತಿಪದದ ಅರ್ಥವನ್ನೂ ಮತ್ತು ಶಾಸನದ ಭಾಷಾಂತರವನ್ನೂ ಆಧುನಿಕ ಕನ್ನಡದಲ್ಲಿ ಒದಗಿಸಿರುವುದು ಈ ನಿಯತಕಾಲಿಕೆಗಳಲ್ಲಿ, ಪ್ರಕಟವಾಗಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಳಗನ್ನಡ ಶಾಸನಗಳನ್ನು ಶೋಧಿಸಿ, ಸಂಗ್ರಹಿಸಿ, ಕಾಲಾನುಕ್ರಮದಲ್ಲಿ ಮಾಲಿಕೆಯ ವಿಶೇಷತೆಯಾಗಿದೆ. ಹಳಗನ್ನಡ ಪಠ್ಯದಲ್ಲಿರುವ ಪದಗಳನ್ನೂ ವಾಕ್ಯಗಳನ್ನೂ ಗುರುತಿಸಿ, ವಿಭಜಿಸಿ, ಓದನ್ನು ಸರಳಗೊಳಿಸಲಾಗಿದೆ. ಉಸಿರುತಾಣಗಳನ್ನಾಗಲೀ ವಿರಾಮ ಚಿಹ್ನೆಯಾಗಲೀ ಸೂಚಿಸದೆ ಬರೆಯುತ್ತಿದ್ದ ಹಳಗನ್ನಡ ಪದ್ಯದಲ್ಲಿ ಇವನ್ನು ಗುರುತಿಸಿ, ಪದ ಮತ್ತು, ವಾಕ್ಯಗಳ ನಡುವೆ ಅಂತರವನ್ನು ತಂದುಕೊಂಡು, ಪಠ್ಯವನ್ನಿಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ, ಮೊದಲ ಸಹಸ್ರಮಾನದ ಗ್ರಾಮನಾಮಗಳನ್ನು, ವ್ಯಕ್ತಿನಾಮಗಳನ್ನು, ಸಂಸ್ಥೆ ಮತ್ತು ಸಾಮಾಜಿಕ ಘಟಕಗಳನ್ನು, ಧರ್ಮಸಂಸ್ಥೆಗಳನ್ನು, ಅರಸರನ್ನು, ಆಡಳಿತಘಟಕಗಳನ್ನು, ಧರ್ಮಸಂಪ್ರದಾಯಗಳನ್ನು, ಈ ಬಗೆಯ ಇನ್ನೂ ಹತ್ತಾರು ಸಂಗತಿಗಳ ವಿಷಯಗಳನ್ನು ಕ್ಷಣಮಾತ್ರದಲ್ಲಿ ಗುರುತಿಸುವ ಅನುಕೂಲತೆಯನ್ನು ಸಂಶೋಧಕರು ಇನ್ನು ಮುಂದೆ ಈ ಸಂಪುಟಗಳಿಂದ ಪಡೆದುಕೊಳ್ಳಬಹುದಾಗಿದೆ. ಹತ್ತಾರು ಸಂಪುಟಗಳಲ್ಲಿ ಹಾಗೂ ಸಂಚಿಕೆಗಳಲ್ಲಿ ಹಂಚಿಹೋಗಿದ್ದ ವಿಷಯಗಳನ್ನು ಇಲ್ಲಿ ವ್ಯವಸ್ಥಿತವಾಗಿ ಒಂದೆಡೆ ಒದಗಿಸಿರುವುದರಿಂದ, ಇದರ ಲಾಭ ಪಡೆದುಕೊಂಡು ಪುರಾತನ ಇತಿಹಾಸ ರಚನೆಯು ಮತ್ತು ಹಳಗನ್ನಡದ ಅಧ್ಯಯನವು ಹೆಚ್ಚು ತೀವ್ರತೆ ಪಡೆದುಕೊಂಡು ಹೆಚ್ಚು ಪ್ರಗತಿ ಸಾಧಿಸುವ ಸಾಧ್ಯತೆಯನ್ನುಂಟು ಮಾಡಿದೆ.
©2024 Book Brahma Private Limited.