‘ಲಿಂಗಾಯತ ಅಸ್ಪೃಶ್ಯರು- ಒಂದು ಅಧ್ಯಯನ’ ಡಾ. ಸಾವುಕಾರ ಎಸ್. ಕಾಂಬಳೆ ಅವರ ಕೃತಿ. 9 ಅಧ್ಯಾಯಗಳಲ್ಲಿ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಮೊದಲ ಅಧ್ಯಯದಲ್ಲಿ ಅಧ್ಯಯನದ ಅಗತ್ಯ, ಸ್ವರೂಪ, ಆಕರದ ವಿವರಗಳಿದ್ದರೆ, ಎರಡನೇ ಅಧ್ಯಯನದಲ್ಲಿ ಅಸ್ಪೃಶ್ಯತೆಯ ನಿವಾರಣೆ: ಕರ್ನಾಟಕದ ಶರಣರ ಹೋರಾಟ ವಿಷಯದಡಿ ಸೈದ್ಧಾಂತಿಕ ವಿವೇಚನೆ, ಅನ್ವಯಿಕ ಕಾರ್ಯಾಚರಣೆ, ಚಾರಿತ್ರಿಕ ಬೆಳವಣಿಗೆ ವಿಚಾರಗಳಡಿ ವಿವರಣೆಗಳಿವೆ. ನಾಲ್ಕನೇ ಅಧ್ಯಾಯದಲ್ಲಿ ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠಗಳು, ಐದನೇ ಅಧ್ಯಾಯದಲ್ಲಿ ಸಾಮಾಜಿಕ ಜೀವನ, ಆರನೇ ಅಧ್ಯಾಯದಡಿ ಧಾರ್ಮಿಕ ಜೀವನ, ಏಳನೇ ಅಧ್ಯಾಯದಡಿ ಬದುಕಿನ ಸ್ಥಿತಿಗತಿಗಳು, ಎಂಟನೇ ಅಧ್ಯಾಯದಡಿ ಸಂಬಂಧಗಳು ಮತ್ತು ಭವಿಷ್ಯ ಹಾಗೂ ಒಂಬತ್ತನೇ ಅಧ್ಯಾಯದಡಿ ಸಮಾರೋಪದ ವಿವರಣೆಗಳಿವೆ. ಇದು ಅಧ್ಯಯನಾತ್ಮಕ ಕೃತಿ.
©2024 Book Brahma Private Limited.