‘ಕೃಷ್ಣರಾಜವಿಲಾಸ’ ಕೃತಿಯು ಎಂ.ಪಿ. ಮಂಜಪ್ಪ ಶೆಟ್ಟಿ ಅವರ ಸಂಪಾದಿತ ಕೃತಿಯಾಗಿದ್ದು, ಮದ್ದಗಿರಿ ನಂಜಪ್ಪ ವಿರಚಿತ ಗ್ರಂಥವಾಗಿದೆ. ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಮೈಸೂರು ಒಡೆಯರ ಕಾಲ ಒಂದು ಪರ್ವಕಾಲ, ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ, ಪ್ರೋತ್ಸಾಹ ಮತ್ತು ಪೋಷಣೆ ಬಹುಮುಖವಾದ್ದು. ಅವರು ಹತ್ತಾರು ಮಂದಿ ಕವಿಗಳಿಗೆ ಆಶ್ರಯ ನೀಡಿ ಪೋಷಿಸಿ ಅವರನ್ನು ಪ್ರೋತ್ಸಾಹಿಸಿದುದೇ ಅಲ್ಲದೆ ಅವರಲ್ಲಿ ಕೆಲವರು ಸ್ವತಃ ಸಾಹಿತ್ಯ ರಚನೆಯನ್ನೂ ಮಾಡಿದರು. ಅಂಥ ಪ್ರಮುಖರಲ್ಲಿ ಮುಮ್ಮಡಿ ಕೃಷ್ಣರಾಜನೂ ಒಬ್ಬ, ಅವನ ಆಶ್ರಿತರಲ್ಲಿ ಮುದ್ದು ನಂಜಪ್ಪ ಕೂಡ ಮುಖ್ಯನಾದ ಕವಿ. ಅವನು ಪ್ರಸ್ತುತ 'ಕೃಷ್ಣರಾಜ ವಿಲಾಸ'ದ ಕರ್ತೃ. ಅದನ ಬಗೆಗೆ ಈ ಕಾವ್ಯದಲ್ಲಿಯೇ ಹೀಗೆ ಹೇಳಿದೆ ಇರಲಾ ನೃಪಾಲಚೂಡಾಮಣಿಯ ಸೇವೆಯೊಳು ಧರೆಯ ಜನರೆಲ್ಲವವರೊಳಗೆ ತದ್ವಂಶಭವ ಹರಭಕ್ತ ಶಿವಲಿಂಗಧಾರಿಯಾತ್ಮಜ್ಞಾನಸಂಧಾನನಿಶ್ಚಯಗಂಣಿ ಧರೆಯೊಳಗೆ ಮಧುಗಿರಿಯ ನಂಜಪ್ಪನೆಂಬ ಹೆಸ ರಿರುವ ಕನ್ನಡ ಕವಿಯು ಪ್ರಖ್ಯಾತಿಯಿಂದಲೋ ಪ್ಪಿರುತಾ ಧರಾಧೀಶನಂಘ್ರಯಂಗವಂಶಜಭ್ರಮರನಾನಂದದಿಂದ ಭಯಭರಿತ ಭಕ್ತಿಯಿಂದನ ನೃಜೇಂದ್ರ ನಿ ಶ್ಚಯದಿಂದ ಗುರುದೇವತಾರೂಪ ಪಿತೃಮಾತೃ ಪ್ರಿಯ ಬಂಧುವರ್ಗವಹುದೆಂದು ತ್ರಿಕರಣಶುದ್ಧಿಯಿಂದ ವಂಚನೆಯಿಲ್ಲದೆ ನಯವಿನಯದಿಂ ಸಕಲ ಕೃತ್ಯದೊಳು ಸೇವಿಸುವ ರಯವನರಿದಾ ನೃಪಾಲೋತ್ರವುಂ ಪರ ಪ್ರಿಯದಿಂದ ಕರೆದನುದಿನಂ ಸಮೀಪದೊಳು ಕಾದಿಹುದೆಂದ ನೇಮವಿತ್ತು ಎನ್ನುವ ಕಾವ್ಯದೊಂದಿಗೆ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.