ಕಿತ್ತೂರು ಸಂಸ್ಥಾನ ದಾಖಲೆಗಳು ಸಂಪುಟ-2 ಎ.ಬಿ. ವಗ್ಗರ ಅವರ ಸಂಪಾದಿತ ಕೃತಿಯಾಗಿದೆ. ಬ್ರಿಟೀಷ್ ದಾಖಲೆಗಳು ಕಿತ್ತೂರು ಸಂಸ್ಥಾನ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ಮತ್ತು ಆ ನಂತರದ ದಂಗೆಗಳನ್ನು ಹೇಗೆ ಕಾಣುತ್ತವೆ ಎಂಬುದನ್ನು ತಿಳಿಯಲು ಈ ಆಕರಗಳು ಅಗತ್ಯವಾಗಿದ್ದ ಕಾರಣ ಇವುಗಳ ಶೋಧನೆಗೆ ತೊಡಗಬೇಕಾದ ಜರೂರು ಇತ್ತು. ಇತಿಹಾಸಕಾರರು ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಲಭ್ಯವಿದ್ದ ಆಕರಗಳನ್ನು ಬಳಸಿಕೊಂಡಿದ್ದಾರೆಂಬುದು ನಿಜ. ಆದರೆ ಸಮಗ್ರ ದಾಖಲೆಗಳ ಶೋಧ ಈವರೆಗೂ ಆಗಿರಲಿಲ್ಲ. ಈಗ ಇವು ನಮ್ಮ ಸಂಶೋಧಕರು ಮತ್ತು ಇತಿಹಾಸಕಾರರಿಗೆ ಲಭ್ಯವಾದಲ್ಲಿ ಇತಿಹಾಸದ ಪುನರಚನೆಗೆ ಮತ್ತು ವ್ಯಾಖ್ಯಾನಿಸುವಿಕೆಗೆ ನೆರವಾಗುತ್ತವೆ. ಈ ಆಕರಗಳು ವಸಾಹತುಶಾಹಿಯು ದೇಶೀಯ ಸಂಗ್ರಾಮವನ್ನು ಕಾಣುವ ಬಗೆಯನ್ನು ಕಟ್ಟಿಕೊಡುತ್ತವೆ. ಆಗಿನ ರಾಜಕೀಯ, ಸಾಮಾಜಿಕ ಸ್ಥಿತಿಗತಿಯ ಚಿತ್ರಣವೂ ಇಲ್ಲಿ ದೊರೆಯುತ್ತದೆ ಎನ್ನುತ್ತಾರೆ ಪ್ರೊ. ಮಲ್ಲಿಕಾರ್ಜುನ ಹಿರೇಮಠ.
©2024 Book Brahma Private Limited.