ಕರ್ನಾಟಕದ ಕರಕುಶಲ ಕಲೆಗಳು

Author : ಚಂದ್ರಶೇಖರಯ್ಯ, ಬಿ.ಎಂ

Pages 250

₹ 180.00




Year of Publication: 2021
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಶಿವಮೊಗ್ಗ
Phone: 9449886390

Synopsys

‘ಕರ್ನಾಟಕದ ಕರಕುಶಲ ಕಲೆಗಳು’ ಕೃತಿಯು ಬಿ. ಎಂ ಚಂದ್ರಶೇಖರಯ್ಯ ಅವರ ಅಧ್ಯಯನ ಕೃತಿಯಾಗಿದೆ. ಈ ಕೃತಿಯಲ್ಲಿ ವಿವಿಧ ರಾಜ್ಯಗಳ ಕರಕುಶಲ ವೈವಿಧ್ಯತೆಗಳು ಮೇಳೈಸಿವೆ.  ಚಿತ್ರಕಲೆ, ಕುಂಭಕಲೆ, ಜಾನಪದ ಗೊಂಬೆ, ಕೈಮಗ್ಗ ಜವಳಿ, ಕಸೂತಿ ಕೆಲಸ, ಆಟಿಕೆ, ಕಂಬಳಿ ಮತ್ತು ಗೂಡಾರಗಳ ನೇಯ್ಗೆ, ಬುಟ್ಟಿ ಚಾಪೆಗಳ ಹೆಣಿಗೆ ಮೊದಲಾದ ನೂರಾರು ಕಲೆಗಳ ಒಳನೋಟವನ್ನು ಇಲ್ಲಿ ನೀಡಲಾಗಿದೆ.

ಇಳಕಲ್ ಸೀರೆಯ ಸೊಗಸನ್ನು ‘ನೂಲಿನಲ್ಲಿ ನೇಯ್ದ ಕಾವ್ಯ’ ಅಧ್ಯಾಯದಲ್ಲಿ ಬಣ್ಣಿಸಲಾಗಿದೆ. ಅತಿ ಪ್ರಮುಖವಾದ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪಗಳನ್ನು ಅಮೂಲಾಗ್ರವಾಗಿ ಚರ್ಚಿಸಲಾಗಿದೆ. ಗೊಮ್ಮಟೇಶ್ವರ, ನಟರಾಜ, ಮಹಿಷಾ ಮರ್ಧಿನಿ, ಐಹೊಳೆಯ ಮೂರು ಗುಹಾಂತರ ದೇವಾಲಯಗಳು, ವೆಲ್ಲೂರಿನ ಜಲಕಂಠೇಶ್ವರ ದೇವಾಲಯದಲ್ಲಿರುವ ಆವರಣ, ಕಲ್ಯಾಣ ಮಂಟಪ, ಹಂಪಿಯ ಕಲ್ಲಿನ ರಥ, ಅಜ್ಞಾತ ಶಿಲಾಬಾಲಿಕೆಯರ ಬೀಡದ ಜಲಾಸಂಗ್ವಿಯನ್ನು  ಪರಿಚಯಿಸಲಾಗಿದೆ.

About the Author

ಚಂದ್ರಶೇಖರಯ್ಯ, ಬಿ.ಎಂ
(02 February 1939)

ಇವರು ಬಳ್ಳಾರಿ ಜಿಲ್ಲೆಯ ಕೂಡ್ಲಗಿಯವರು. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಬಿ ಎ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಗಳಿಸಿದ್ದಾರೆ. ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 'ಜನಪದ' ಹಾಗೂ 'ಮಾರ್ಚ್ ಆಫ್ ಕರ್ನಾಟಕ' ಪತ್ರಿಕೆಗಳ ಉಪ ಹಾಗೂ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ‘ಚಿರ ಸ್ಮರಣೀಯರು’ ವ್ಯಕ್ತಿ ಚಿತ್ರಣ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಮತ್ತು ‘ಭಗತ್ ಸಿಂಗ್’ ಅವರ ಜೀವನ ಚರಿತ್ರೆ. ಮಾತ್ರವಲ್ಲದೆ  ಆಯಾರಾಮ್ - ಗಯಾರಾಮ್, ನಮ್ಮೆಲ್ಲರ ಬಾಪು ಗಾಂಧೀಜಿ, ಮದನ ಮೋಹನ ಮಾಳವೀಯ ಇವು ಇವರ ಅನುವಾದಿತ ...

READ MORE

Reviews

‘ಕರ್ನಾಟಕದ ಕರಕುಶಲ ಕಲೆಗಳು’ ಕೃತಿಯ ವಿಮರ್ಶೆ

ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಕರಕುಶಲ ಕಲೆಗಳಿಗೆ ವಿಶಿಷ್ಟ ಸ್ಥಾನವಿದೆ. 'ಕರಕುಶಲ' ಎಂದರೆ ಮನುಷ್ಯನ ಹೃದಯ, ಬುದ್ಧಿ ಮತ್ತು ಕೈಗಳು ಏಕೀಭವಿಸಿ ತನ್ಮಯತೆಯಿಂದ ಕಾರ್ಯ ನಿರ್ವಹಿಸುವ ಅಪೂರ್ವ ಶ್ರಮದ ಪ್ರತಿಫಲ. ಈ ನೆಲದ ವೈವಿಧ್ಯಮಯ ಕರಕುಶಲ ಕಲೆಗಳನ್ನು ನಾಡಿಗೆ ಪರಿಚಯಿಸುವ ಕೃತಿಯೇ ಬಿ.ಎಂ. ಚಂದ್ರಶೇಖರಯ್ಯ ಅವರ 'ಕರ್ನಾಟಕದ ಕರಕುಶಲ ಕಲೆಗಳು'. ಕರಕುಶಲ ಕಲೆಯೆಂದರೆ ಮಕ್ಕಳ ಆಟಿಕೆ ಅಥವಾ ಮನರಂಜನೆಯ ವಸ್ತುಗಳ ತಯಾರಿಕೆ ಮಾತ್ರವಲ್ಲ. ಮನುಷ್ಯನ ಅಗತ್ಯಗಳಿಗೆ ತಕ್ಕಂತೆ ರೂಪುಗೊಂಡ ಹಲವು ಬಗೆಯ ವಸ್ತುಗಳಿಗೆ ಕಲಾತ್ಮಕ ಮೆರುಗು ನೀಡುವ ಒಂದು ರೀತಿಯ ಧ್ಯಾನ. ಅಂತಹ ಧ್ಯಾನದಲ್ಲಿ ಅರಳಿದ ಕರ್ನಾಟಕದ ಸಂಸ್ಕೃತಿಯನ್ನು ಈ ಕೃತಿಯು ಘನೀಕರಿಸಿ ಹಿಡಿದಿಟ್ಟಿದೆ ಎಂದರೆ ತಪ್ಪಾಗಲಾರದು.

ರಾಜ್ಯದ ಕರಕುಶಲ ಕಲೆಗಳಲ್ಲಿ ವೈವಿಧ್ಯ ಮೇಲೈಸಿದೆ. ಚಿತ್ರಕಲೆ, ಕುಂಭಕಲೆ, ಮರದ ಕೆತ್ತನೆ, ಕಲ್ಲು ಕೆತ್ತನೆ, ಲೋಹ ಶಿಲ್ಪ, ಆಭರಣಗಳ ತಯಾರಿಕೆ, ಮಣ್ಣಿನ ಮೂರ್ತಿ, ಮಡಕೆ-ಕುಡಿಕೆಗಳ ತಯಾರಿಕೆ, ದಂತ ಕೆತ್ತನೆ, ಹುದುಗು ಕಲೆ, ಜಾನಪದ ಗೊಂಬೆ, ಕೈಮಗ್ಗ, ಜವಳಿ, ಕಸೂತಿ ಕೆಲಸ, ಆಟಿಕೆ, ಕಂಬಳಿ ಮತ್ತು ಗುಡಾರಗಳ ನೇಯ್ಕೆ, ಬುಟ್ಟಿ, ಚಾಪೆಗಳ ಹೆಣಿಗೆ ಮೊದಲಾದ ನೂರಾರು ಕಲೆಗಳ ಒಳನೋಟವನ್ನು ಇಲ್ಲಿ ನೀಡಲಾಗಿದೆ. ಇಳಕಲ್ ಸೀರೆಗಳ ಸೊಗಸನ್ನು ನೂಲಿನಲ್ಲಿ ನೇಯ್ದ ಕಾವ್ಯ' ಅಧ್ಯಾಯದಲ್ಲಿ ಬಣ್ಣಿಸಲಾಗಿದೆ.

ಅತಿಪ್ರಮುಖವಾದ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳನ್ನು ಆಮೂಲಾಗ್ರವಾಗಿ ಚರ್ಚಿಸಲಾಗಿದೆ. ಗೊಮ್ಮಟೇಶ್ವರ, ನಟರಾಜ, ಮಹಿಷಮರ್ಧಿನಿ, ಐಹೊಳೆಯ ಮೂರು ಗುಹಾಂತರ್ದೇವಾಲಯಗಳು, ವೆಲ್ಲೂರಿನ ಜಲಕಂಠೇಶ್ವರ ದೇವಾಲಯದ ಆವರಣದಲ್ಲಿರುವ ಕಲ್ಯಾಣ ಮಂಟಪ, ಹಂಪಿಯ ಕಲ್ಲಿನ ರಥ, ಅಜಾತ ಶಿಲಾಬಾಲಿಕೆಯರ ಬೀಡಾದ ಜಲಸಂಗ್ನಿಯನ್ನು ಪರಿಚಯಿಸಲಾಗಿದೆ. ಗಂಗ ಶೈಲಿ, ಹೊಯ್ಸಳ ಶೈಲಿ, ವಿಜಯನಗರ ಶೈಲಿ, ಬ್ರಿಟಿಷರು ಹಾಗೂ ಇಸ್ಲಾಂ ವಾಸ್ತುಶಿಲ್ಪದ ಮೇಲೂ ಬೆಳಕು ಚೆಲ್ಲಲಾಗಿದೆ. ನಿರ್ದಿಷ್ಟ ಕರಕುಶಲ ಕಲೆಗಳಿಗೆ ಸಂಬಂಧಿಸಿದ ಕೆಲವು ಅಧ್ಯಯನಗಳನ್ನು ಲೇಖಕರು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಅವರು ಬಹು ವರ್ಷಗಳ ಹಿಂದೆ ಇದೇ ಹೆಸರಿನ ಕೃತಿಯನ್ನು ಮಕ್ಕಳಿಗಾಗಿ ಪರಿಚಯಿಸಿದ್ದರು.

(ಕೃಪೆ : ಪ್ರಜಾವಾಣಿ)

Related Books