ಕರ್ನಾಟಕದ ಅಂದಿನ ಶ್ರೇಷ್ಠರ ಇಂದಿನ ವಂಶಸ್ಥರು ಮತ್ತು ಕುರುಹುಗಳು

Author : ಎಂ. ಚಿದಾನಂದಮೂರ್ತಿ

₹ 60.00




Year of Publication: 2013
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09
Phone: 08067415553

Synopsys

“ಕನ್ನಡದ ನೆಲವನ್ನು ಆಳಿದ ಹಲವು ರಾಜಮನೆತನಗಳು ಮತ್ತು ಅವರ ಕಾಲದಲ್ಲಿ ಕನ್ನಡದಲ್ಲಿ ಬರೆಯುವ ಮೂಲಕ ಕನ್ನಡಕ್ಕೊಂದು ದಿವ್ಯ ಇತಿಹಾಸವನ್ನು ಕೊಟ್ಟು ಹೋದ ಕವಿಗಳ ಹೆಸರುಗಳನ್ನು ನಾವು ಬಲ್ಲೇವು, ಆದರೆ, ಅವರ ಈಗಿನ ವಂಶಸ್ಥರು ಯಾರು ಅನ್ನುವುದನ್ನು ಬಲ್ಲೆವೇ? ಈ ಪುಸ್ತಕ ಅಂತಹದೊಂದು ಪ್ರಯತ್ನವನ್ನು ಮಾಡಿದೆ. ರಾಜವಂಶಸ್ಥರ, ಕವಿಗಳ ಈಗಿನ ವಂಶಸ್ಥರನ್ನು ಪತ್ತೆ ಮಾಡಿ, ಭೇಟಿ ಆಗಿ, ಅವರ ಬಳಿಯಿರುವ ಆಧಾರಗಳನ್ನು ಕಂಡು, ತಿಳಿದು, ಅದನ್ನು ಕನ್ನಡಿಗರಿಗೆ ಪರಿಚಯಿಸಿ ಕೊಡುವ ಈ ಕಿರು ಹೊತ್ತಗೆ ಒಂದು ಅಪರೂಪದ ಹೊತ್ತಗೆಯಾಗಿದೆ.

 

About the Author

ಎಂ. ಚಿದಾನಂದಮೂರ್ತಿ
(10 May 1931)

ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ...

READ MORE

Related Books