ಕನ್ನಡ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡ ಒಗಟುಗಳನ್ನು ಮೂಡಿ ಬಂದಿದ್ದರು ಅದನ್ನು ಒಂದೆಡೆ ಸಂಗ್ರಹಿಸಿದ್ದು ಕಡಿಮೆಯೆ. ಬೋಳಾರ ಶಿವರಾಮ ಶೆಟ್ಟಿ ಅವರು ಹಲವು ದಶಕಗಳಿಂದ ಪ್ರಚಲಿತದಲ್ಲಿ ಇರುವ ಮತ್ತು ಇಲ್ಲದ ಒಗಟುಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕದ ವಿವಿಧ ಪ್ರಾಂತೀಯ ಭಾಷಾ ವಲಯಗಳಿಗೆ ಸಂಬಂಧಪಟ್ಟ ಒಗಟುಗಳ ಸಂಕಲನಗಳಲ್ಲದೆಯೇ, ಲಂಬಾಣಿ, ಹವ್ಯಕ ಈ ಮುಂತಾದ ನಿರ್ದಿಷ್ಟ ಭಾಷಿಕ, ಸಾಮಾಜಿಕ ಸಮುದಾಯಗಳಿಗೆ ಸಂಬಂಧಪಟ್ಟಂತಹ ಒಗಟುಗಳ ಇಲ್ಲಿವೆ.
ಕನ್ನಡ ಮತ್ತು ತುಳು ಭಾಷೆಯ ವಿದ್ವಾಂಸರಾದ ಡಾ. ಬಿ. ಶಿವರಾಮ ಶೆಟ್ಟಿ ಅವರು ಸಂಶೋಧಕರು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರು. ಮೂಲತಃ ಉಪ್ಪುನ ಬೋಳಾರದಾರ್ ದವರು. ತಂದೆ ಪುದಾರ್ ಚೆಂದಪ್ಪ ಶೆಟ್ಟಿ. ತಾಯಿ ಪುದಾರ್ ಸೇಸಮ್ಮ. ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಜೋಸೆಪ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದ ಅವರು ನಂತರ ಕಾಶಿ ಪ್ರೌಢಶಾಲೆ, ಗಣಪತಿ ಜೂನಿಯರ್ ಕಾಲೇಜು, ಸರಕಾರಿ ಕಾಲೇಜು ಮಂಗಳೂರು, ಮೈಸೂರು ವಿಶ್ವವಿದ್ಯಾನಿಲಯ ಸ್ನಾತಕೊತ್ತರ ಅಧ್ಯಯನ ಕೇಂದ್ರದಿಂದ ಎಂ.ಎ.ಕನ್ನಡ ಮಂಗಳೂರು ವಿಶ್ವವಿದ್ಯಾನಿಲಯದಿಂದ `ತುಳುನಾಡಿನ ಸಸ್ಯ ಜಾನಪದ’ ವಿಷಯದಲ್ಲಿ ಪಿ.ಎಚ್ಡಿ. ಪಡೆದರು. ...
READ MORE