ಡಾ. ವಾಸಯ್ಯ ಎನ್. ಅವರು ಸಂಶೋಧನಾತ್ಮಕವಾಗಿ ಅಧ್ಯಯನ ನಡೆಸಿದ ಕೃತಿ-ಕನ್ನಡ ಸಣ್ಣ ಕತೆಗಳಲ್ಲಿ ಮಳೆ ಮತ್ತು ಸಾಮಾಜಿಕ ಪ್ರಜ್ಞೆ. ಮಳೆಯು ಬೇರೆ ಬೇರೆ ಜ್ಞಾನಶಾಖೆಯಿಂದ ಬೇರೆ ಬೇರೆ ಅರ್ಥವನ್ನು ನೀಡುತ್ತದೆ. ಧಾರ್ಮಿಕತೆಯಲ್ಲಿ ದೇವರ ವರ ಎಂದು, ಅಧ್ಯಾತ್ಮಿಕತೆಯಲ್ಲಿ ಜೀವ ಜಲ ಎಂದು, ಮಳೆ ಹೇಗೆ ಉಂಟಾಗುತ್ತದೆ ಎಂಬುದಕ್ಕೆ ವಿಜ್ಞಾನದ ವಿವಿಧ ಶಾಖೆಗಳು ವಿವರಿಸುತ್ತವೆ. ಇಂತಹ ಪರಿಕಲ್ಪನೆಯ ಮಳೆಯನ್ನು ಕನ್ನಡದ ಕಥೆಗಾರರು ಕಥೆಯ ಸಾಂದರ್ಭಿಕ ಹಿನ್ನೆಲೆಯಲ್ಲಿ ಹೇಗೆ ಚಿತ್ರಿಸಿದ್ದಾರೆ ಎಂಬುದರ ಅಧ್ಯಯನವು ಈ ಕೃತಿಯ ಮೂಲ ವಸ್ತು.
©2024 Book Brahma Private Limited.