ಲೇಖಕ ಡಾ. ತಿಪ್ಪೇರುದ್ರ ಸಂಡೂರ ಅವರ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟುವನ್ನು ಆಳವಾಗಿ ಅಧ್ಯಯನ ನಡೆಸಿ ರಚಿಸಿದ ಕೃತಿ- ʼಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು : ಒಂದು ಅಧ್ಯಯನʼ. ಸಾಹಿತಿ ಡಾ. ಎ. ಸುಬ್ಬಣ್ಣ ರೈ ಅವರು ಬೆನ್ನುಡಿ ಬರೆದು ‘ಲೇಖಕರು ನಿಘಂಟುವಿನ ರಚನಾ ವಿನ್ಯಾಸಕ್ಕೆ ಅರ್ಹವಾಗಿಯೇ ವಿಶೇಷ ಮಹತ್ವವನ್ನು ಕಲ್ಪಿಸಿಕೊಟ್ಟಿದ್ದಾರೆ. ಶಬ್ದಸಂಗ್ರಹ ವಿಧಾನ, ಅವುಗಳ ನಿಷ್ಪತ್ತಿ, ಮೂಲ, ಪ್ರಯೋಗಗಳು, ಅರ್ಥದ ಬಗೆಗಳು ಇವೆಲ್ಲವನ್ನೂ ವಿವೇಚನೆಗೊಳಪಡಿಸಿದ್ದಾರೆ. ಶಬ್ದಗಳ ಪ್ರಯೋಗಗಳಿಗೆ ಸಂಬಂಧಪಟ್ಟಂತೆ ಶಾಸನೋಕ್ತ ಪ್ರಯೋಗಗಳು, ಕಾವ್ಯಾಂತರ್ಗತ ಪ್ರಯೋಗಗಳು, ಗಾದೆಗಳು, ನುಡಿಗಟ್ಟುಗಳು ಹೀಗೆ ಈ ಕನ್ನಡ ನಿಘಂಟುವಿನ ಮಹತ್ವವನ್ನು ತೆರೆದು ತೋರಿಸುವ ರೀತಿಯಲ್ಲಿ ಅದರ ರಚನಾ ವಿನ್ಯಾಸವನ್ನು ಪರಿಶೀಲಿಸಿದ್ದಾರೆ. ಪ್ರಸ್ತತ ಅಧ್ಯಯನದ ಮೂಲಕ ಡಾ. ತಿಪ್ಪೇರುದ್ರ ಪ್ರಭಣ್ಣ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪೂರ್ಣಗಳ ಹಿರಿಮೆ-ಗರಿಮೆಗಳನ್ನು ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆʼ. ಎಂದು ಪ್ರಶಂಸಿದ್ದಾರೆ.
©2024 Book Brahma Private Limited.