ಬೇಂದ್ರೆ ಕಾವ್ಯದೊಂದಿಗೆ ಹೋಲಿಸಿಯೂ ಬೇಂದ್ರೆ ಮತ್ತು ಕಂಬಾರರ ನಡುವಣ ವ್ಯತ್ಯಾಸಗಳು, ಭಾಷಾ ಸಮೃದ್ಧಿ ಮತ್ತು ಅದರ ಸೃಜನಶೀಲ ಬಳಕೆಯ ಮತ್ತು ನಿಯಂತ್ರಣದ ಪ್ರಶ್ನೆಗಳು; ಜಾನಪದದಿಂದ ಕಂಬಾರರು ತಮ್ಮ ಕವಿತೆಯ ವಸ್ತು-ಆಕೃತಿಗಳನ್ನು ಪಡೆದುಕೊಂಡ ಕ್ರಮ ಮತ್ತು ಅದರ ಪರಿಣಾಮಗಳು; ಕವಿತೆಯ ಜಾನಪದ ಆವರಣಕ್ಕೂ ಕವಿಯ ಆಧುನಿಕ ಪ್ರಜ್ಞೆಗಳಿಗೂ ಇರುವ ಸಂಬಂಧದ ಸ್ವರೂಪ ಜಾನಪದ ಕಥನಗಳನ್ನು ಹೋಲುವ ಕವನಗಳಿಗೂ, ಆಧುನಿಕ ಬದುಕಿನ ಬಗ್ಗೆ ಬರೆದ ಕವನಗಳಿಗೂ ಇರುವ ವ್ಯತ್ಯಾಸಗಳು; ಕಣ್ಮರೆಯಾಗುತ್ತಿರುವ ಒಂದು ಜೀವನಕ್ರಮದ ಬಗೆಗೆ ಮತ್ತು ಆಧುನಿಕ ಜೀವನಕ್ರಮಗಳ ಬಗೆಗೆ ಕವಿತೆಗಳಲ್ಲಿ ವ್ಯಕ್ತವಾಗುವ ಧೋರಣೆ- ಈ ಎಲ್ಲಾ ಮುಖ್ಯ ಸಂಗತಿಗಳನ್ನು ಕನ್ನಡ ವಿಮರ್ಶೆ ಸಾಕಷ್ಟು ಆಳವಾಗಿ ಚಿಂತಿಸಿದೆ....? ಕನ್ನಡದ ಬಹುಮುಖ್ಯ ಕವಿಗಳಲ್ಲಿ ಒಬ್ಬರಾದ ಡಾ| ಚಂದ್ರಶೇಖರ ಕಂಬಾರ ಅವರ ಕಾವ್ಯದ ಬಗ್ಗೆ ಈ ವರೆಗೆ ಪ್ರಕಟವಾದ ಎಲ್ಲ ಮುಖ್ಯ ವಿಮರ್ಶಾತ್ಮಕ ಬರಹಗಳನ್ನು ಪ್ರಸ್ತುತ ಈ ಸಂಪುಟದಲ್ಲಿ ಸಂಕಲಿಸಲಾಗಿದೆ.
©2024 Book Brahma Private Limited.