ಸಮಕಾಲೀನ ಪ್ರಸ್ತುತತೆಯ ಸೋಗು ಅಥವಾ ಫ್ಲೋಗನ್ನುಗಳನ್ನು ಹಾಕದೆ ಕಂಬಾರರ 'ಚಕೋರಿ' ಒಂದು ದೊಡ್ಡ ಸಮಕಾಲೀನ ಅಗತ್ಯವನ್ನು ಪೂರೈಸುತ್ತದೆ. 'ಬಲ'ದ ಬಲಾತ್ಕಾರದ ಸಂಸ್ಕೃತಿಯ ವಿರುದ್ಧ ಶಕ್ತಿ ಸಂಸ್ಕೃತಿಯ ಸಾರ್ಥಕತೆಯನ್ನು ಸರ್ವರ ಮನಸ್ಸು ಮುಟ್ಟುವ ಹಾಗೆ ಸ್ವಾರಸ್ಯವಾಗಿ ಅಭಿವ್ಯಕ್ತಿಸಿದೆ. ಈ ಅಭಿವ್ಯಕ್ತಿಯನ್ನು ಸಾಧಿಸಿರುವುದು ಸಮಕಾಲೀನ ಜಗತ್ತಿನಲ್ಲಾಗಲೀ ಅಥವಾ ಸಮಕಾಲೀನ ಜಗತ್ತಿನ ನಿರ್ಮಾತೃ ಪ್ರತಿನಿರ್ಮಾತೃಗಳು ತಯಾರಿಸಿರುವ ಭವಿಷ್ಯದ ನೀಲನಕಾಶೆಗಳಲ್ಲಿ ಇಲ್ಲದ 'ಅಂದಿಂಗೆ ಹಳೆಯ'ವಾದರೂ 'ಇಂದಿಂಗೆ ಎಳೆಯ'ವಾಗಿರುವ ಕನಸಿನ ಮೂಲಕ. ಕಂಬಾರರ 'ಚಕೋರಿ' ತನ್ನ ಸ್ವರೂಪದಲ್ಲಿ, ಈ ಶತಮಾನದ ಇತರ ಮಹಾಕಾವ್ಯಗಳಿಗಿಂತ ಭಿನ್ನವಾಗಿದೆ. ಅದರ ಭಾಷೆಯ ಸ್ವರೂಪ ಲಯಬದ್ಧ ಏರಿಳಿತಗಳನ್ನು ಒಳಗೊಂಡ ಸಮುದ್ರದ ಮೇಲೆಯಂತೆ ಮೇಲುನೋಟಕ್ಕೆ ಶಾಂತವಾಗಿ ಕಂಡರೂ ಆಸ್ಫೋಟಕ ಶಕ್ತಿಯನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಹಳೆಯ ಚಂಪೂ ಪ್ರಕಾರಕ್ಕೆ ಹೊಸ ರೂಪ ಮತ್ತು ಶಕ್ತಿಗಳನ್ನು ಕಂಬಾರರು ನೀಡಿದ್ದಾರೆ.
©2024 Book Brahma Private Limited.