ಬನ್ನಂಜೆ ಗೋವಿಂದಾಚಾರ್ಯರ ಸಾಹಿತ್ಯ ಕೃಷಿ ಕ್ಷೇತ್ರದ ಹರಹು ಅಸೀಮವಾದುದು. ತಾಳೆಗರಿ ಹಸ್ತಪ್ರತಿಗಳಿಂದ ಮೊದಲುಗೊಂಡು, ಅವರ ಸಂಶೋಧನ ಕ್ಷಿತಿಜವೂ ಬಹು ವಿಸ್ತರದ್ದು. ಆದಮ್ಯವಾದ ಕನ್ನಡಪ್ರೀತಿಯಿಂದ ಬನ್ನಂಜೆಯವರು ಕನ್ನಡದಲ್ಲಿ ಅಪ್ರಮೇಯವಾದ ಆನೇಕ ಮೌಲಿಕಗ್ರಂಥಗಳನ್ನು ರಚಿಸಿದ್ದಾರೆ. ಅದು ಕನ್ನಡ ಭಾಷೆಯ ಸೌಭಾಗ್ಯವೆಂದೇ ಹೇಳಬೇಕು. ಅಂತಹ ಭಾಗ್ಯಾಭರಣಗಳ ಪರಿಚಯಾತ್ಮಕವಾದ ಹೊತ್ತಗೆಯೇ 'ಗೋವಿಂದಮಣಿ ದರ್ಪಣ', ಕೃತಿಗಳ ಸ್ತೂಲವಾದ ಪರಿಚಯ, ವಸ್ತು-ವಿಷಯಗಳ ಮಾಹಿತಿ, ಅನನ್ಯತೆ- ಒಟ್ಟಿನಲ್ಲಿ, ಕೃತಿಗಳಲ್ಲಿ ಏನೇನಿದೆ ಎಂಬ ಪುಟ್ಟ ಕೈಪಿಡಿ 'ಗೋವಿಂದಮಣಿದರ್ಪಣ'.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ, ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ್ಯಾಂಕಿನೊಡನೆ ಕುವೆಂಪು ಚಿನ್ನದ ...
READ MORE