‘ಭಾರತೀಯ ನಾಗರಿಕತೆಗೆ ಮನುವಿನ ಕೊಡುಗೆ’ ಕೃತಿಯು ಬಿ.ಎಚ್. ಶ್ರೀಧರ ಅವರ ಅಧ್ಯಯನ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಇತರ ಮತಧರ್ಮಗಳಿಗಿರುವಂತೆ ಹಿಂದು ಧರ್ಮಕ್ಕೆ ಪ್ರವಾದಿಯಿಲ್ಲ; ಹಿಂದು ಎಂಬುದು ಪ್ರವಾದಿಯ ಹೆಸರಲ್ಲ. ಅದಕ್ಕೆ ಮತಸ್ಥಾಸಕನಾವನೂ ಇಲ್ಲ. ಅಪಾರ ಧರ್ಮಗ್ರಂಥವಾದ ವೇದವಾದರೂ ಅಂಕಿತನಾಮವೆನಿಸುವ ಮೊದಲು ಜ್ಞಾನದ ಆಕರ ಎಂಬ ಸಾಮಾನ್ಯ ರೂಢನಾಮವೇ ಆಗಿತ್ತು. ಅದರ ಹಿಂದಿನ ಹೆಸರು ಆರ್ಯಧರ್ಮ ಎಂದು. ಮನು ಪ್ರಪಂಚ ಆರ್ಯಯುಗದ್ದು. ಅವನ ನೆಲ ಆರ್ಯಾವರ್ತ. ಅವನು ಹೇಳಿದ್ದು ಆರ್ಯರ ಆರ್ಯ ಅಥವಾ ಪೂಜ್ಯವಾದ ಆಚಾರ, ವಿಚಾರ, ಮನುಸ್ಮೃತಿಯು ವೈದಿಕ ಸಂಸ್ಕೃತಿಯ ಅಂತಿಮ ಘಟ್ಟಿವನ್ನು ಅಭಿಲೇಖಿಸುತ್ತದೆ ಎಂಬುದನ್ನು. ಅದೊಂದು ಹಿಂದು ನಾಗರಿಕತೆಯ ಮೊದಲ ಮೈಲುಗಲ್ಲು; ವೇದಕಾಲೀನ ಭಾರತದ ಸಂಸ್ಕೃತಿ. ಒಟ್ಟಾರೆಯಾಗಿ ಈ ಕೃತಿಯು ವೈದಿಕವಾದ ಹಲವಾರು ವಿಚಾರಗಳನ್ನು ತಿಳಿಸುತ್ತದೆ.
©2024 Book Brahma Private Limited.