ಹಿರಿಯ ಸಾಹಿತಿ ಎಸ್. ಶ್ರೀಕಂಠಶಾಸ್ತ್ರೀ ಅವರು ರಚಿಸಿದ ಕೃತಿ-ಭಾರತೀಯ ಸಂಸ್ಕೃತಿ. ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಔನ್ನತ್ಯದ ಬಗ್ಗೆ ವಿಶ್ವದಾದ್ಯಂತ ಪ್ರಶಂಸೆಗಳಿವೆ. ಇವು ಕೇವಲ ಯಾರನ್ನೋ ಮೆಚ್ಚಿಸಲು ಅಲ್ಲ; ಬದಲಾಗಿ, ಭಾರತೀಯ ಸಂಸ್ಕೃತಿಯನ್ನು ಕಂಡುಕೊಂಡ ವಿದೇಶಿ ಪ್ರವಾಸಿಗರೇ ಬರೆದ ಪ್ರವಾಸ ಕಥನಗಳಲ್ಲಿ ಈ ಕುರಿತು ಕಾಣಿಸಿದ್ದಾರೆ. ಕಲೆ, ಸಾಹಿತ್ಯ, ವಾಸ್ತುಶಿಲ್ಪಿ ಎಲ್ಲದರಲ್ಲೂ ಉನ್ನತ ಸಾಂಸ್ಕೃತಿಕತೆಯನ್ನು ಒಳಗೊಂಡಿದೆ ಎಂಬುದರ ಚಿತ್ರಣ ನೀಡುವ ಕೃತಿ ಇದು.
ಡಾ. ಎಸ್. ಶ್ರೀಕಂಠ ಶಾಸ್ತ್ರೀ ( ಸೊಂಡೆಕೊಪ್ಪ ಶ್ರೀಕಂಠ ಶಾಸ್ತ್ರೀ) ಮೂಲತಃ ನಂಜನಗೂಡಿನವರು. ಆದರೆ, ಇವರ ಪೂರ್ವಜರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಸೊಂಡೆಕೊಪ್ಪದವರು. 1904ರ ನವೆಂರ್ 4 ರಂದು ಜನನ. ಸಿಡುಬು ರೋಗಕ್ಕೆ ತುತ್ತಾಗಿ ಎಡಗಣ್ಣು, ಎಡಗಿವಿಯ ಶಕ್ತಿ ಕಳೆದುಕೊಂಡಿದ್ದರು. ಕೋಲಾರದಲ್ಲಿ ಪ್ರೌಢಶಾಲೆವರೆಗೂ ಶಿಕ್ಷಣದ ನಂತರ ಮೈಸೂರಿನಲ್ಲಿ ಓದು ಆರಂಭ. 1935 ರಲ್ಲಿ ಮೈಸೂರು ವಿ.ವಿ. ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿ 32 ವರ್ಷದ ನಂತರ ನಿವೃತ್ತಿ. ಕನ್ನಡ, ತೆಲುಗು, ಸಂಸ್ಕೃತ, ಇಂಗ್ಲಿಷ್ ಮಾತ್ರವಲ್ಲದೆ, ಜರ್ಮನ್, ಫ್ರೆಂಚ್ ಕಲಿತಿದ್ದರು. ಇತಿಹಾಸ ತಜ್ಞರೆಂದೇ ಖ್ಯಾತಿ ಪಡೆದಿದ್ದರು. ಎಂ.ಎ. ಅಧ್ಯಯನ ಮಾಡುತ್ತಿರುವಾಗಲೇ ಲಂಡನ್ ನ ಪ್ರತಿಷ್ಠಿತ ...
READ MORE