ಲತಾ ಮೈಸೂರು ಅವರು ತಮ್ಮ ಸಂಶೋಧನಾ ಪ್ರಬಂಧಕ್ಕಾಗಿ ಆಯ್ದುಕೊಂಡ ’ಬಸವಣ್ಣನವರ ಕಾಂತ್ರಿ ಮಾರ್ಗ’ ವಿಷಯದ ಪ್ರಕಟಿತ ಕೃತಿ ’ಬಸವಣ್ಣನ ಕಲ್ಯಾಣ ಹುಡುಕುತ್ತಾ...’. ಸಮಾಜಶಾಸ್ತ್ರೀಯ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಬಸವಣ್ಣನ ಕ್ರಾಂತಿಯ ಒಳನೋಟಗಳ ವಿಶ್ಲೇಷಣೆ ಇಲ್ಲಿದೆ. ಶರಣರ ವಚನಗಳು ಭಕ್ತಿಯ ಚಳವಳಿಯಾಗಿ, ಧಾರ್ಮಿಕ -ರಾಜಕೀಯ ಹಾಗೂ ಸಾಮಾಜಿಕ ಸಂಘರ್ಷದ ನೆಲೆಯಾಗಿ ಕ್ರಾಂತಿಯು ಹಲವು ಮಗ್ಗಲುಗಳನ್ನು ಪಡೆದುಕೊಂಡಿದ್ದನ್ನು ಈ ಕೃತಿಯು ದಾಖಲಿಸುತ್ತದೆ.
ಲತಾ ಮೈಸೂರು ಹುಟ್ಟಿದ್ದು1966ರಲ್ಲಿ. ಮೈಸೂರಿನವರಾದ ಲತಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿಯೇ ಪೂರ್ಣಗೊಳಿಸಿ, 1989ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ. ಎ. ಪದವಿ ಪಡೆದಿದ್ದಾರೆ. ಮಹಾರಾಜ ಕಾಲೇಜು ಸೇರಿದಂತೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಒಟ್ಟು 21 ವರ್ಷಗಳ ಕಾಲ ಉಪನ್ಯಾಸ ವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ಅವರು ಸದ್ಯ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಬಸವಣ್ಣನ ಕಲ್ಯಾಣ ಹುಡುಕುತ್ತಾ...' (ಬಸವಣ್ಣನ ಕ್ರಾಂತಿಮಾರ್ಗ: ಕನ್ನಡ ಸಾಹಿತ್ಯ ಸಂದರ್ಭದಲ್ಲಿ' ಎಂಬ ಸಂಶೋಧನಾ ಪಿಎಚ್,ಡಿ. ಪದವಿ) 1993ರಲ್ಲಿ 'ಆವರಣ' (ಕವನ ಸಂಕಲನ) 2007ರಲ್ಲಿ 'ಮೇಲಾಗಲೊಲ್ಲೆನು ...
READ MORE