ಶ್ರೇಣಿಕೃತ ಸಮಾಜದಲ್ಲಿ ಇದುವರೆಗೂ ಸ್ಥಾಪಿತವಾದ ಚಹರೆಗಳು ಮತ್ತು ಹೊಸ ಪ್ರಯೋಗಗಳನ್ನು ಅಭಿವೃದ್ಧಿ ಸಿದ್ಧಾಂತ ಕೃತಿಯಲ್ಲಿ ಚಿತ್ರಿಸಿದ್ದಾರೆ. ಆ ನಮ್ಮ ಕಾಲದ, ಎಲ್ಲ ಕಾಲದ ಅಗತ್ಯವಾಗಿ ಕಾಣುವ, ಅವನ್ನು ಚಂದ್ರ ಪೂಜಾರಿಯವರು ಅರಿತು ಅಭಿವೃದ್ಧಿಯ ಪರಿಕಲ್ಪನೆಗೆ ಒಂದು ಪ್ರವೇಶಿಕೆಯನ್ನು ಚರ್ಚೆಯ ಮೂಲಕ ಹುಟ್ಟು ಹಾಕಿದ್ದಾರೆ.
ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿರುವ ಎಂ.ಚಂದ್ರಪೂಜಾರಿ ಅವರು ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಶೋಧನೆ: ಏನು? ಏಕೆ? ಹೇಗೆ?, ಸಮಾಜ ಸಂಶೋಧನೆ, ಸಂಶೋಧನ ಜವಾಬ್ದಾರಿ, ಸಂಶೋಧನ ಪ್ರಸ್ತಾವ, ದೇಶೀಯತೆ ನೆರಳಲ್ಲಿ ವಿಕೇಂದ್ರೀಕರಣ, ಜಂಟಿ ಅರಣ್ಯ ಯೋಜನೆ, ಅಭಿವೃದ್ಧಿ ಮತ್ತು ರಾಜಕೀಯ, ರಾಜಕೀಯದ ಬಡತನ, ಬಡತನ ಮತ್ತು ಪ್ರಜಾಪ್ರಭುತ್ವ- ಇವರ ಪ್ರಮುಖ ಕೃತಿಗಳು. ...
READ MORE