ಎಸ್. ವಿದ್ಯಾಶಂಕರ ಅವರು ಚಾಮರಾಜ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಜನಿಸಿದರು. ತಂದೆ ವಿದ್ವಾನ್' ಸ.ಸ. ಶಿವಶಂಕರಪ್ಪ ತಾಯಿ ವಿಶಾಲಾಕ್ಷಮ್ಮ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ೧೯೬೬ರಲ್ಲಿ ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಎಂ.ಎ. ಪದವಿ ಗಳಿಸಿ ೧೯೭೧ರಲ್ಲಿ ಬೆಂಗಳೂರು ವಿ.ವಿ. ಪಿಎಚ್.ಡಿ. ಪದವಿ ಗಳಿಸಿದರು. ಬೆಂಗಳೂರು ವಿ.ವಿ. ಕನ್ನಡ ವಿಭಾಗದ ಸ್ನಾತಕೋತ್ತರ ಸಂಶೋಧನ ಸಹಾಯಕರಾಗಿ ಸೇವೆ ಸಲ್ಲಿಸಿ ೧೯೭೦ ರಿಂದ ೮೫ರರಿಗೆ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಂತರ ನಿರ್ದೇಶಕರಾಗಿ ಸೇವೆ ಸಲ್ಲಿಸಿ ೨೦೦೧ರಲ್ಲಿ ವೃತ್ತಿಯಿಂದ ವಿಶ್ರಾಂತಿ ಪಡೆದರು. ೧೯೯೫೪-೯೭ರಲ್ಲಿ ಹಂಪಿಯ ಕನ್ನಡ ವಿ.ವಿ. ಸಿಂಡಿಕೇಟ್ ಸದಸ್ಯರಾಗಿದ್ದರು.
ಕರ್ನಾಟಕ ಸರ್ಕಾರದ ಸಮಗ್ರ ವಚನ ಸಾಹಿತ್ಯ ಪ್ರಕಟಣ ಯೋಜನೆಯ ಸಂಪಾದಕ ಮಂಡಲಿ ಸದಸ್ಯರು. 'ಬಸವಪಥ' ಮಾಸಿಕ ಸಂಪಾದಕ ಸದಸ್ಯ, ಸಾಂಸ್ಕೃತಿಕ ರಾಗೂ ಸಂಶೋಧನ ಮತ್ತು ಪ್ರಕಟಣ ಸಮಿತಿ ಸದಸ್ಯರು. ಇವರು ನೂರಕ್ಕೂ ಹಚು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ವೀರಶೈವ . ಪುರಾಣಗಳು: ಒಂದು ಅಧ್ಯಯನ ಪಿಎಚ್.ಡಿ. ಮಹಾಪ್ರಬಂಧ, ಇವರ ಐದಾರು ಸಂಶೋಧನ ಕೃತಿಗಳೂ ಏಳೆಂಟು ಸಂಪಾದಿತ ಕೃತಿಗಳೂ ಹಲವು ಕೃತಿಗಳ ಗದ್ಯಾನುವಾದವನ್ನೂ ಮಾಡಿದ್ದಾರೆ.