About the Author

ಲೇಖಕ ಹರೀಶ್‌ ಮಂಜೊಟ್ಟಿ ಅವರು ಮೂಲತಃ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಮಂಜೊಟ್ಟಿಯವರು. ದಿ. ಚಂದಪ್ಪ ಗೌಡ ಹಾಗೂ ಯಶೋಧಾ ಅವರ ಮಗನಾಗಿ ಜನಿಸಿದ ಇವರು, ಬಂಟ್ವಾಳದ ಸರಕಾರಿ ಪ್ರಾಥಮಿಕ ಶಾಲೆ ಪೆರಾಜೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳ್ತಂಗಡಿಯ ಕರಾಯದಲ್ಲಿ ಪ್ರೌಢ ಶಿಕ್ಷಣ, ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಪಿ.ಯು.ಸಿ. ಮತ್ತು ಪದವಿ ಶಿಕ್ಷಣಗಳನ್ನು ಪಡೆದಿದ್ದಾರೆ. ಪ್ರಸ್ತುತ ಮಂಗಳೂರಿನ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಮಾರು 15 ವರ್ಷಗಳಿಂದ ಹೆಡ್ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೋಲಿಸ್ ಇಲಾಖೆ ನಡೆಸುವ ಕ್ರೀಡಾಕೂಟದಲ್ಲಿ ಸತತ ಎರಡು ಬಾರಿ ರಾಜ್ಯ ಮಟ್ಟದಲ್ಲಿ ಆಡಿದ ಅನುಭವ ಇವರದು. ಕ್ರೀಡೆಯ ಜೊತೆಗೆ ಸಾಹಿತ್ಯದಲ್ಲೂ ಅಪಾರವಾದ ಆಸಕ್ತಿ. ಸುಮಾರು 650ಕ್ಕಿಂತಲೂ ಅಧಿಕ ಕನ್ನಡ ಹಾಗೂ ತುಳು ಭಾಷಾ ಕೃತಿಗಳ ಸಂಗ್ರಹಣೆ ಮಾಡಿದ್ದಾರೆ. ಇವರು ಬರೆದ ಹಲವಾರು ಲೇಖನ, ಕವನಗಳು ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅನೇಕ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ನಡೆಸುವ ವಾರ್ಷಿಕ ಕ್ರೀಡಾಕೂಟದಲ್ಲಿ ಸಮಾಜಕ್ಕೆ ಅರ್ಥಪೂರ್ಣವಾದ ಸಂದೇಶ ನೀಡುವ ಕಿರುಪ್ರಹಸನಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಜೊತೆಗೆ ʻಅನ್ಯಾಯದ ಫಲʼ ಎಂಬ ಕನ್ನಡ ನಾಟಕ ಮತ್ತು 'ಮಾಮಿ ಮರ್ಮಲ್' ಎಂಬ ತುಳು ನಾಟಕಗಳನ್ನೂ ಇವರು ರಚಿಸಿದ್ದಾರೆ. ಕೃತಿಗಳು: ಮರಕ್ಕೂರು ಜನಪದ ದೈವಗಳು, ಸಾಂಗತ್ಯ.

ಹರೀಶ್‌ ಮಂಜೊಟ್ಟಿ