ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ

Author : ಲಕ್ಷ್ಮೀ ಜಿ. ಪ್ರಸಾದ್

Pages 336

₹ 300.00




Year of Publication: 2013
Published by: ಪ್ರಚೇತ ಬುಕ್ ಹೌಸ್
Address: # XH38+GX2, ಮಹಾಂತರ ಬಡಾವಣೆ, ಕೆಂಪೇಗೌಡ ನಗರ, ಬೆಂಗಳೂರು-560019
Phone: 094485 05732

Synopsys

‘ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ :  ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ಎಂಬುದು ಲೇಖಕಿ ಲಕ್ಷ್ಮೀ.ಜಿ. ಪ್ರಸಾದ್ ಅವರ ಅಧ್ಯಯನ ಕೃತಿ. ತುಳು ನಾಡು ಹತ್ತು ಹಲವು ಸಾಂಸ್ಕೃತಿಕ ಭಿನ್ನತೆಗಳಿಂದ ಕೂಡಿದ್ದು, ಅಧ್ಯಯನ ಯೋಗ್ಯವಾಗಿದೆ. ತುಳು ನಾಡು ಕರ್ನಾಟಕದ ಭಾಗವಾದರೂ ಅದು ಐತಿಹಾಸಿಕ ಹಾಗೂ ಸಾಂಸ್ಕೃತಿಕ ವಿಭಿನ್ನತೆಗಳೊಂದಿಗೆ ತನ್ನದೇ ಆದ ವೈಶಿಷ್ಟ್ಯವನ್ನು ಪಡೆಯುತ್ತದೆ. ಅಲ್ಲಿಯ ಜನರ ಆರಾಧ್ಯದೇವ ನಾಗಬ್ರಹ್ಮನ ಕುರಿತು ಪುರಾಣ-ಇತಿಹಾಸಗಳ ಕುರಿತು ಹೇರಳ ಸಾಮಗ್ರಿ ಇದು. ಮಾತ್ರವಲ್ಲ; ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ಈ ಹಬ್ಬಗಳ ಸಾಂಸ್ಕೃತಿಕ ಪರಿಗಳೊಂದಿಗೆ ಹೆಣೆದುಕೊಂಡ ಪರಿಯು ಇಲ್ಲಿ ಅಧ್ಯಯನದ ವಸ್ತು ಆಗಿದೆ. 

About the Author

ಲಕ್ಷ್ಮೀ ಜಿ. ಪ್ರಸಾದ್
(29 October 1972)

ಲೇಖಕಿ ಲಕ್ಷ್ಮೀ ಜಿ ಪ್ರಸಾದ್ ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರು. ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಪಾಂಡಿತ್ಯವಿದ್ದು, ಕನ್ನಡ ಉಪನ್ಯಾಸಕರಾಗಿದ್ದಾರೆ.  ತಂದೆ -ನಾರಾಯಣ ಭಟ್ ವಾರಣಾಸಿ, ತಾಯಿ -ಸರಸ್ವತಿ. ಪತಿ ಗೋವಿಂದ ಪ್ರಸಾದ ಪಂಜಿಗದ್ದೆ, ಮಗ- ಅರವಿಂದ.  ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಬಿಎ.ಸ್ಸಿ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂ.ಎ[ಕನ್ನಡ] ನಾಲ್ಕನೇ ರ‍್ಯಾಂಕ್.  ಮಂಗಳೂರು ವಿಶ್ವ ವಿದ್ಯಾಲಯದಿಂದ ಎಂ.ಎ[ಸಂಸ್ಕ್ರತ] ಪ್ರಥಮ ರ‍್ಯಾಂಕ್.  ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂಎ[ಹಿಂದಿ], ಎಂ.ಫಿಲ್[ವಿಷಯ:ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ),  ಪಿಹೆಚ್.ಡಿ[ವಿಷಯ:ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ) ಹಂಪಿ ಕನ್ನಡ ವಿಶ್ವ ವಿದ್ಯಾಲಯ. ಎರಡನೆಯ ಪಿಹೆಚ್.ಡಿ ಪದವಿ (ವಿಷಯ‘ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ’) ದ್ರಾವಿಡ ವಿಶ್ವ ವಿದ್ಯಾಲಯ ...

READ MORE

Related Books