ಸಾಹಿತ್ಯವನ್ನು ಬೇರೆ ಬೇರೆ ಶಿಸ್ತುಗಳ ಜೊತೆ ಇಟ್ಟು ಅಧ್ಯಯನಿಸುವುದು ಬಹಳ ಕುತೂಹಲಕಾರಿಯಾದುದು ಮತ್ತು ಉಪಯುಕ್ತ. ಇಂಥ ಅಂತರ್‌ಶಿಸ್ತೀಯ ಅಧ್ಯಯನ ಕನ್ನಡದ ಸಂದರ್ಭದಲ್ಲಿ ಬಹು ಕಾಲದಿಂದ ನಡೆದಿದೆ. ಪ್ರವೀಣ ಟಿ.ಎಲ್ ಮತ್ತು ಸದಾನಂದ ಜೆ.ಎಸ್ ಅವರ ಈ ಕೃತಿಯಲ್ಲಿ ಸಾಹಿತ್ಯ ಕಥನವನ್ನು ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಒಂದು ಮಹತ್ವಪೂರ್ಣ ಕೆಲಸ ಆಗಿದೆ. ಸಮಾಜಶಾಸ್ತ್ರೀಯ ನೆಲೆಯು ಸಾಹಿತ್ಯಕ್ಕೆ ಒದಗಿಸುವ ಪರಿವೇಷವು ಇಲ್ಲಿ ಚರ್ಚೆಗೆ ಒಳಪಟ್ಟಿದೆ.
©2024 Book Brahma Private Limited.