ಕರ್ನಾಟಕದ ಕಲೆ ವಾಸ್ತುಶಿಲ್ಪದ ಬಗ್ಗೆ ಬೇರೆ ಬೇರೆ ದೃಷ್ಟಿಕೋನಗಳಿಂದ ಅಧ್ಯಯನ ಮಾಡುವುದಕ್ಕೆ ಅವಕಾಶಗಳಿವೆ. ಕಲೆ ಮತ್ತು ವಾಸ್ತುಶಿಲ್ಪಕ್ಕೆ ಕರ್ನಾಟಕ ತನ್ನದೇ ಆದ ಭವ್ಯ ಪರಂಪರೆಯನ್ನು ಹೊಂದಿದೆ. “ದೇಶ ಸುತ್ತು ಕೋಶ ಓದು” ಎಂಬ ನಾಣ್ಣುಡಿಯಂತೆ ಕರ್ನಾಟಕವನ್ನು ಸುತ್ತಿ ಪರಂಪರೆಯನ್ನು ತಿಳಿಯುವ ಹಂಬಲದಿಂದ ನಾನು ರಾಮಾಯಣ ಕಾಲದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಸ್ಥಳ, ಶಿಲಾಯುಗ ಕಾಲದ ಜನರ ವಾಸಸ್ಥಳ ಹಾಗೂ ಭವ್ಯ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಸ್ಥಳವೇ ಈ ಹಂಪಿಯನ್ನು ಆಯ್ದುಕೊಂಡೆನು. ಸುಮಾರು 2009 ರಿಂದಲೂ ಪ್ರತಿವರ್ಷ ಹಂಪಿಗೆ ಭೇಟಿ ನೀಡುತ್ತಿದ್ದೆ. ಪ್ರತೀ ಸಲವೂ ಒಂದೊಂದು ಹೊಸ ಹೊಸ ವಿಷಯಗಳನ್ನು ಕಲಿಯಲು ಅಲ್ಲಿ ಪ್ರೇರಣೆ ಸಿಗುತ್ತಿತ್ತು. ಹಂಪಿಯ ಕಲೆ ಮತ್ತು ವಾಸ್ತುಶಿಲ್ಪ ಯಾವಾಗಲೂ ನನ್ನನ್ನು ಸೆಳೆಯುತ್ತಿತ್ತು. ಹಂಪಿಯ ಅವಶೇಷಗಳ ಕುರಿತು ಅನೇಕ ಸಂಶೋಧನೆಗಳು ಕೂಡಾ ನಡೆದಿವೆ. ಪ್ರಸ್ತುತ ಕೂಡಾ ನಡೆಯುತ್ತಿವೆ. ಈ ಆನೆಗುಂದಿ ಮತ್ತು ಹಂಪಿಯಲ್ಲಿರುವ ಸ್ಮಾರಕಗಳ ಕುರಿತು ಒಂದು ಚಿಕ್ಕ ಕೃತಿಯನ್ನು ರಚಿಸಿ ನಮ್ಮ ವೈಭವ ಹಂಪಿಯ ಬಗ್ಗೆ ಅಧ್ಯಯನವನ್ನು ಮಾಡಿ ಇಲ್ಲಿರುವ ಕಲೆ ಮತ್ತು ವಾಸ್ತುಶಿಲ್ಪದ ಮಾಹಿತಿಯನ್ನು ಜನ ಸಾಮಾನ್ಯರಿಗೆ ಈ ಕೃತಿಯ ಮೂಲಕ ತಿಳಿಸುವ ಮೂಲ ಉದ್ದೇಶವಾಗಿದೆ.
©2024 Book Brahma Private Limited.