ಮ್ಯಾಸ ಕಂಪಳದ ಚಹರೆ

Author : ಪ್ರಹ್ಲಾದ ಡಿ.ಎಂ.

Pages 164

₹ 130.00




Year of Publication: 2020
Published by: ನಂದಿತ ಪ್ರಕಾಶನ
Address: #117, ಬಿಲ್ಲವ ನಿಲಯ, ಎ- ಜುನ್ 3ನೇ ಹಂತ, ಜೆ.ಪಿ.ನಗರ, ಮೈಸೂರು

Synopsys

ಮ್ಯಾಸ ಕಂಪಳದ ಚಹರೆ-ಲೇಖಕ ಎಂ.ಡಿ. ಪ್ರಹ್ಲಾದ ಅವರು ಬರೆದ ಹತ್ತು ಸಂಶೋಧನಾ ಬರಹಗಳ ಸಂಗ್ರಹ ಕೃತಿ. ಮ್ಯಾಸಬೇಡರ ಬುಡಕಟ್ಟು ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಈ ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ಅಮರೇಶ ಯತಗಲ್ ‘ಮ್ಯಾಸ ಬೇಡರ ಸಾಂಸ್ಕೃತಿಕ ವೀರರ ಪವಿತ್ರ ವಾದ್ಯ ಢಗಮುವಿನ ತಯಾರಿಕೆ, ಪಾವಿತ್ಯ್ರತೆ ಹಾಗೂ ಅವರ ಕಥನಗಳಲ್ಲಿಯ ಸಂಘರ್ಷದ ನೆಲೆಗಳನ್ನು ಗುರುತಿಸುವುದರೊಂದಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಪ್ರಕ್ರಿಯೆಯನ್ನು ಸೈದ್ಧಾಂತಿಕವಾಗಿ ನಿರೂಪಿಸಿದ್ದಾರೆ. ಬುಟಗಲೊರು ಬೆಡಗಿನ ಆರಾಧ್ಯ ದೈವವಾದ ಕೊಳಗಲು ಬೊಮ್ಮನಾಯಕನ ಕಥನಗಳ ಸಾಂಸ್ಕೃತಿಕ ಚಹರೆಗಳು ಮನೋಜ್ಞವಾಗಿವೆ. ವ್ಯಾಪಕ ಕ್ಷೇತ್ರ ಕಾರ್ಯದ ಮೂಲಕ ಮ್ಯಾಸಬೇಡರ ಪರಿಸರದಲ್ಲಿ ಇಂದಿಗೂ ಜೀವಂತವಾಗಿರುವ ಕಂಪಳದೇವರು, ಕಿಲಾರಿಗಳು ಮತ್ತು ದೇವರೆತ್ತುಗಳ ಆಚರಣೆಗಳು, ಸಾಂಸ್ಕೃತಿಕ ವೀರರ ನಂತರದ ಸ್ಥಾನಗಳನ್ನು ಪಡೆದು, ದೇವರ ಸ್ಥಾವನ್ನು ಕಂಡುಕೊಂಡ ಬಗೆ ಬಹು ಕುತೂಹಲಕಾರಿಯಾಗಿದೆ. ಮ್ಯಾಸಬೇಡರ ಅಧಿಕೃತ ಸಂಶೋಧನೆಯ ಸಾಲಿಗೆ ಈ ಕೃತಿ ಸಾಂಸ್ಕೃತಿಕ ಕಥನವಾಗಿ ನಿಲ್ಲುವ ತಲಸ್ಪರ್ಶಿ ಅಧ್ಯಯನವಾಗಿದೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಪ್ರಹ್ಲಾದ ಡಿ.ಎಂ.
(14 March 1993)

ಲೇಖಕ ಪ್ರಹ್ಲಾದ ಡಿ.ಎಂ. ಅವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ (ಜನನ: 1993ರ ಮಾ.14 ) ಸುಟ್ಟ ಕರ್ನಾರಹಟ್ಟಿಯವರು. ಗ್ರಾಮದಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ, ನಂತರ ಮೊಳಕಾಲ್ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ.ಪದವೀಧರರು. ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ ವಿಶ್ವವಿದ್ಯಾಲಯ ಹಂಪಿ ಜಾನಪದ ಅಧ್ಯಯನ ವಿಭಾಗದಲ್ಲಿ "ಬುಡಕಟ್ಟು ಸಮುದಾಯದ ಕಂಪಳದೇವರು: ಸಾಂಸ್ಕೃತಿಕ ಸಂಕಥನ" ವಿಷಯದ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ’ಮೀನುಗಾರನ ಮೈನಕ್ಕಿ’ ಇವರ ಪ್ರಥಮ ಕವನ ಸಂಕಲನ.  ಅನುಸೃಷ್ಟಿ (ಲೇಖನಗಳ  ಸಂಪಾದಿತ ಕೃತಿ) ...

READ MORE

Related Books