‘ಲಿಂಗತ್ವ ಸಮನ್ಯಾಯದೆಡೆಗೆ’ ಸಬಿಹಾ ಭೂಮಿಗೌಡ ಅವರ ಕೃತಿ. ಲಿಂಗ ಸಮಾನತೆ ಹಿನ್ನೆಲೆಯಲ್ಲಿ ಲಿಂಗತ್ವದ ಕುರಿತು ಆಳ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳ ಮೂಲಕ ಅಂಕಿ ಅಂಶಗಳನ್ನು ಕಲೆ ಹಾಕಿ ಈ ಮಹತ್ವದ ಕೃತಿಯನ್ನು ರಚಿಸಲಾಗಿದೆ. ಸ್ತ್ರೀತನವನ್ನು ಹೊಗಳುತ್ತಲೇ ಪುರುಷತ್ವದ ಕ್ರೌರ್ಯವನ್ನು ಹೇರಿಕೆ ಮಾಡುವ ಮೂಲಕ ಲಿಂಗ ಭಿನ್ನತೆಯನ್ನೇ ಹೇಗೆ ಅಸಮಾನತೆಗೆ ದಾರಿಯನ್ನಾಗಿಸಿಕೊಂಡಿದ್ದಾರೆ ಎಂಬ ಅಂಶಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ಪುಸ್ತಕ ಪರಿಚಯ- ಕೃಪೆ- ಹೊಸತು
ಕ್ಷೇತ್ರಕಾರ್ಯದ ಮೂಲಕ ಮಾಹಿತಿ, ಅಂಕಿ- ಅಂಶಗಳನ್ನು ಕಲೆಹಾಕಿ ರೂಪಿಸಿರುವ ಕೃತಿಯಿದು. 'ಲಿಂಗ' ಭಿನ್ನತೆ ಎಂಬುದು ಸಹಜ. ಆದರೆ 'ಲಿಂಗತ್ವ' – ಎಂಬುದು ಒಂದು ಸಾಮಾಜಿಕ ರಚನೆಯಾಗಿದೆ – ಎಂಬ ತಾತ್ವಿಕತೆಯ ಮೂಲಕ ಅಧ್ಯಯನ ಕೈಕೊಂಡು ಹಲವಾರು ಮಹತ್ತ್ವದ ವಿಚಾರಗಳನ್ನು ಲೇಖಕಿ ಹೊರಹಾಕಿದ್ದಾರೆ. ಸ್ತ್ರೀತ್ವ ಮತ್ತು ಪುರುಷತ್ವ ಹೇರಿಕೆ, ಅದನ್ನಾಧರಿಸಿ ಜವಾಬ್ದಾರಿಯ ಹಂಚಿಕೆ, ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿ - ಹೀಗೆ ಅನೇಕ ಅಂಶಗಳ ಕುರಿತಾದ ಸಾಮಾಜಿಕ ಸ್ವರೂಪವನ್ನು ಇಲ್ಲಿ ವಿವರಿಸಲಾಗಿದೆ. ಲಿಂಗತ್ವದ ಅಸಮಾನತೆಯನ್ನು ತಿಳಿಸುತ್ತಲೇ, ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ, ಇದೇ ತಿಳುವಳಿಕೆ ಕಾರಣವೆಂದು ತರ್ಕಿಸಲಾಗಿದೆ.
©2024 Book Brahma Private Limited.