ಕರ್ನಾಟಕದಲ್ಲಿರುವ ಸ್ಮಾರ್ತ ಬ್ರಾಹ್ಮಣರ ಎಲ್ಲ ಒಳಪಂಗಡಗಳನ್ನೂ ಕುರಿತ ಸಮಗ್ರ ಮಾಹಿತಿಯುಳ್ಳ ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಎಂಬ ಕೃತಿಯನ್ನು ʻಹರಿವು ಬುಕ್ಸ್ʼಪ್ರಕಾಶನ ಸಂಸ್ಥೆ, ಬೆಂಗಳೂರು ಹೊರತರುತ್ತಿದೆ. ಸುಮಾರು 600 ಪುಟಗಳ ಈ ಸಂಪುಟದಲ್ಲಿ 28 ಒಳಪಂಗಡಗಳ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಇವೇ ಮುಂತಾದವನ್ನು ಕುರಿತು ಸಂಪೂರ್ಣ ವಿವರಗಳು ಲಭ್ಯ. ಆಯಾ ಪಂಗಡಗಳ ಪರಿಣತರೇ ತಮ್ಮ ತಮ್ಮ ಪಂಗಡಗಳ ಬಗ್ಗೆ ಬರೆದಿದ್ದಾರೆ. ನಿಖರ ಮಾಹಿತಿ, ವಸ್ತುನಿಷ್ಠ ನಿರೂಪಣೆ, ಎಲ್ಲರೂ ಓದಬಹುದಾದ ಭಾಷಾ ಶೈಲಿ ಈ ಸಂಪುಟದ ವೈಶಿಷ್ಟ್ಯ. ಈ ಸಂಪುಟದಲ್ಲಿ ಸೇರಿಸಿರುವ ಉಪಪಂಗಡಗಳು ಇವು: ಬಬ್ಬೂರುಕಮ್ಮೆ-ಉಲುಚುಕಮ್ಮೆ-ಸೀರ್ನಾಡು-ಬಡಗನಾಡು-ಹೊಯ್ಸಳ ಕರ್ನಾಟಕರು-ಹಳೆ ಕರ್ನಾಟಕರು (ಮೂಗೂರು)-ಶುಕ್ಲಯಜುರ್ವೇದಿಗಳು-ಹವ್ಯಕರು-ಮಲೆನಾಡ ಹೆಬ್ಬಾರರು-ಕಾಶ್ಮೀರಿ ಬ್ರಾಹ್ಮಣರು-ಕೋಟ ಬ್ರಾಹ್ಮಣರು-ಶಿವಳ್ಳಿ ಬ್ರಾಹ್ಮಣರು-ಕಂದಾವರ ಬ್ರಾಹ್ಮಣರು-ಸ್ಥಾನಿಕರು-ಸಾರಸ್ವತ ಬ್ರಾಹ್ಮಣರು-ಗೌಡಸಾರಸ್ವತ ಬ್ರಾಹ್ಮಣರು-ಮುಲಕನಾಡು-ವೆಲನಾಡ-ಆರುವೇಲು ನಿಯೋಗಿಗಳು-ನಂದವರೀಕರು-ವಂಗೀಪುರಂ ಬ್ರಾಹ್ಮಣರು-ಸಂಕೇತಿಗಳು-ಬೃಹಚ್ಚರಣರು-ವಡಮಾ ಅಯ್ಯರ್ಗಳು-ದೀಕ್ಷಿತರು-ದೇಶಸ್ಥರು-ಚಿತ್ಪಾವನರು-ಕರಹಾಡ ಬ್ರಾಹ್ಮಣರು.
©2024 Book Brahma Private Limited.