ಕನ್ನಡ ಚಿತ್ರಕಾವ್ಯ

Author : ಟಿ.ವಿ. ವೆಂಕಟಾಚಲಶಾಸ್ತ್ರೀ

Pages 540

₹ 700.00




Year of Publication: 2011
Published by: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು
Address: ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ- 570001
Phone: 0821-2419872

Synopsys

ಲೇಖಕ ಡಾ. ಟಿ. ವಿ. ವೆಂಕಟಾಚಲ ಶಾಸ್ರ್ತಿ ಅವರ ಇತಿಹಾಸ ವಿಮರ್ಶೆ ಕೃತಿ ʼ ಚಿತ್ರಕಾವ್ಯʼ. ಪುಸ್ತಕವು ಚಿತ್ರಕಾವ್ಯದ ಬಗ್ಗೆ ಹೇಳುತ್ತಾ ಹೋಗುತ್ತದೆ . ಇದೊಂದು ಕಾವ್ಯಪದ್ಧತಿಯಾಗಿದೆ. ಇಲ್ಲಿ ಕಾವ್ಯವನ್ನು ವಿಶ್ಲೇಷಿಸಿರುವ 'ಚಿತ್ರ' ಎಂಬ ಶಬ್ದದ ಅರ್ಥವೇನು? ಈ ಪ್ರಶ್ನೆಗೆ ದೊರೆಯುವ ಉತ್ತರ, ಆ ಹಲವು ಅರ್ಥಗಳಲ್ಲಿ ಯಾವುದನ್ನು ಗ್ರಹಿಸಬೇಕು ಎಂಬುದನ್ನು ಚಿಂತಿಸಿ, ಗ್ರಹಿಸುವುದರಲ್ಲಿದೆ. ಅಂತಹ ಅರ್ಥಗಳಲ್ಲಿ 'ಪ್ರತೀಕ', 'ವಿಸ್ಮಯಜ್ಜನಕ' ಎಂಬವು ಗಮನಿಸಬೇಕಾದವು. ಕಾವ್ಯದ ಒಂದು ಪ್ರತೀಕ, ಅನುಕರಣೆ, ಚಿತ್ರಪಟದ ಸಾದೃಶ್ಯವುಳ್ಳ ರಚನೆ ಎಂಬುದಾಗಿ ತಿಳಿಯುವಂತೆ “ಏಕಾವಲಿ', 'ಸರಸ್ವತೀ ಕಂಠಾಭರಣಗಳಲ್ಲಿ ಸೂಚನೆಗಳು ದೊರೆಯುತ್ತವೆ. ನಿಜಕಾವ್ಯದಿಂದ ದೊರೆಯುವ 'ಆನಂದ' ಇಲ್ಲಿ ದೊರೆಯುವುದಿಲ್ಲ, 'ವಿಸ್ಮಯ' ಉಂಟಾಗುತ್ತದೆಯೆನ್ನುವುದು ಹೆಚ್ಚು ಪ್ರಚಲಿತವಾದ ಅರ್ಥ, ವಿಸ್ಮಯಕೃತ್ ವೃತ್ತಾದಿವಶಾತ್', ಗೌತುಕವಿಶೇಷಕಾರಿ ಚಿತ್ರಮ್', ಆಶ್ಚರ್ಯಕವಿತ್ರಾತ್ ಚಿತ್ರಮ್, “ಚಿತ್ರಮಾಶ್ಚರ್ಯಂ ತತ್ವಾಂ ಚ ಚಿತ್ರಮ್' ಇಂತಹ ಸೂಚನೆಗಳಿಂದ ಅದು ವಿಶದವಾಗುತ್ತದೆ. ಆಧುನಿಕರೂ ಈ ಅರ್ಥವನ್ನೇ ಸಾಮಾನ್ಯವಾಗಿ ಪುರಸ್ಕರಿಸುತ್ತಾರೆ.

About the Author

ಟಿ.ವಿ. ವೆಂಕಟಾಚಲಶಾಸ್ತ್ರೀ
(26 August 1933)

ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು. ವ್ಯಾಕರಣ, ಛಂದಸ್ಸು, ...

READ MORE

Related Books