ಕನಕದಾಸರು ಸಂಪ್ರದಾಯಸ್ಥ ಸಂಸ್ಕೃತಿಯೊಂದರ ವಿರುದ್ದದ ಪ್ರತಿಭಟನೆಯನ್ನುಅವರ ಕೀರ್ತನೆ ಮತ್ತು ಕೃತಿಯಲ್ಲಿ ದಾಖಲಿಸಿದ್ದಾರೆ ಎಂದು ಪ್ರತಿಪಾದಿಸುವ ಲೇಖಕರು, ಅವರನ್ನು ಮೇಲ್ವರ್ಣೀಯ ಜನರು ತಮ್ಮ ಸೂತ್ರದಲ್ಲಿ ಬಂಧಿಸಿಡುವುದನ್ನು ವಿರೋಧಿಸುತ್ತಾರೆ. ಸಾಮಾಜಿಕ ಚಳವಳಿಯನ್ನು ಪ್ರಾರಂಭಿಸಿ, ಸಾಮಾನ್ಯ ಜನರೊಂದಿಗೆ ಸಮಾನತೆಯ, ಸ್ಥಾನಮಾನದ ವಿಚಾರಗಳಿಗೆ ಹೋರಾಟಕ್ಕಿಳಿದು, ಜನಾಂಗಕ್ಕಾಗುತ್ತಿದ್ದ ನೋವು, ಅಪಮಾನ, ಬೇಸರ, ಕೀಳರಿಮೆಗಳನ್ನು ಭಕ್ತಿಯ ಆಚರಣೆಯಲ್ಲಿ ತೊಡಗಿಕೊಂಡೇ ಮಾನವೀಯ ಮೌಲ್ಯಗಳನ್ನು ಹೇಳುವ ಅನುಭಾವಿಯಾಗಿ ರೂಪುಗೊಂಡವರು ಕನಕದಾಸರು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಏಳು ಅಧ್ಯಾಯಗಳನ್ನೊಳಗೊಂಡ ಈ ಕೃತಿ, ಕನಕದಾಸರ ಸಾಹಿತ್ಯ ಮತ್ತು ಚಳವಳಿಯ ಬೇರೆ ಬೇರೆ ಮಗ್ಗುಲುಗಳನ್ನು ಸ್ಪರ್ಶಿಸುತ್ತದೆ.
©2024 Book Brahma Private Limited.