‘ಘನಪಾಠಸರಣಿ’ ಕೃತಿಯು ವಿದ್ವಾನ್ ಕೆ. ಗಣಪತಿ ಭಟ್ಟ ಅವರ ಶಿಬಿರಕ್ಕೆ ಅನುಕೂಲವಾಗುವಂತೆ ರಚಿಸಿರುವ 10 ಮಂತ್ರಗಳ ಮೂಲ-ಪದ-ಕ್ರಮ-ಜಟಾ-ಘನ ವಿಧಾನಗಳ ಲಘು ಪುಸ್ತಕವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಧರ್ಮ-ಸಂಸ್ಕೃತಿ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳು ಹಾಗೂ ಕೃತಿ ನಿಬಂಧನೆಗಳು ಅನೇಕರಿಗೆ ಆಶ್ಚರ್ಯವನ್ನು ತಂದಿರಬಹುದು. 30.11.2003 ರಂದು ಆರಂಭವಾದ ಈ ಸಂಖ್ಯೆಯು ಒಂದೂವರೆ ವರ್ಷದಲ್ಲಿ ನೂರಕ್ಕೂ ಹೆಚ್ಚ ಮಧ್ಯಮೋತ್ತಮ ಕಾರ್ಯಕ್ರಮಗಳನ್ನು, ಸಮಾರಂಭಗಳನ್ನು ನಡೆಸಿದೆ. ತಾತ್ವಿಕ ಹಿನ್ನೆಲೆಯಿಂದ ನಡೆಸಿದ ಶಿಬಿರಗಳು, ಪ್ರಾತ್ಯಕ್ಷಿಕೆಗಳು, ಗೋಷ್ಠಿಗಳು, ಶಿಕ್ಷಣಕೇಂದ್ರಗಳು, ವರ್ಗಗಳು, ತರಬೇತಿಗಳು, ಪುಸ್ತಕಪ್ರಕಟಣೆಗಳು, ಧ್ವನಿಸುರುಳಿ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಒಂದೇ ಸಂಸ್ಥೆ ಅಲ್ಪ ಸಮಯ-ವೆಚ್ಚದಲ್ಲಿ ಮಾಡಿದೆ ಎಂದರೆ ಇದಕ್ಕೆ ಸಂಬಂಧಪಟ್ಟ ಸಹೃದಯರ, ಶೋತೃಗಳ, ದಾನಿಗಳ, ವಿದ್ಯಾರ್ಥಿಗಳ ಮತ್ತು ಪಾಲಕರ ಪ್ರೋತ್ಸಾ ಪದೇ ಕಾರಣವಾಗಿದೆ. ಸಾಮವೇದ, ಅಥರ್ವವೇದ, ಯೋಗ, ಚತುರಂಗ, ಚಿತ್ರಕಲೆ, ಸಂಗೀತ, ನೃತ್ಯ, ಸ್ತೋತ್ರ ಶಿಬಿರಗಳು ಪಾಮರರಿಂದ ಪಂಡಿತರವರೆಗೂ ಅನುಕೂಲವಾಗಿವೆ.
©2024 Book Brahma Private Limited.