‘ಗೀತಮಾತೆಂಬ ಜ್ಯೋತಿ’ ಖ್ಯಾತ ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರು ರಚಿಸಿರುವ ಕೃತಿ. ಈ ಕೃತಿಯು ಧಾರವಾಡದ ಪ್ರಖ್ಯಾತ ಹಿಂದುಸ್ತಾನಿ ಗಾಯಕಿ ಡಾ.ನಂದಾ ಪಾಟೀಲರ ಸಂಗೀತದ ಅಧ್ಯಯನವಾಗಿದೆ. ಗಾಯಕಿ ಪಾಟೀಲರು ಗ್ವಾಲಿಯರ ಮತ್ತು ಜಯಪುರ ಅತ್ರೌಲಿ ಘರಾಣಿಗಳಿಗೆ ಸೇರಿದವರು. ಅವರು ಪಂ. ನಾರಾಯಣರಾವ ಮುಜುಂದಾರರು ಬೆಳೆಸಿದ ಘರಾಣಿ ಗ್ವಾಲಿಯರ ಘರಾಣಿ ಮತ್ತು ಜಯಪುರ ಘರಾಣಿಯನ್ನು ಉತ್ತುಂಗಕ್ಕೇರಿಸಿದ ಪಂ. ಮಲ್ಲಿಕಾರ್ಜುನ ಮನ್ಸೂರ ಮುಂತಾದ ಹಿರಿಯ ಗಾಯಕರ ಪರಂಪರೆಯ ಕೊಂಡಿಯಾಗಿ ಪ್ರಾಧ್ಯಾಪಕಿಯಾಗಿ ವಿದ್ವಾಂಸರಾಗಿ ಹೆಸರು ಮಾಡಿದ್ದಾರೆ. ಈ ಕೃತಿಯಲ್ಲಿ ಡಾ. ನಂದಾ ಪಾಟೀಲರ ಜೀವನ, ಸಂಗೀತ ಸಾಧನೆ ಮತ್ತು ಅವರು ಹಿಂದುಸ್ತಾನಿ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಎಲ್ಲವನ್ನು ವಿಸ್ತೃತವಾಗಿ ವಿಶ್ಲೇಷಿಸಿದ್ದಾರೆ.
©2024 Book Brahma Private Limited.