ಪ್ರಾಚೀನ ಭಾರತದ ಸ್ಮೃತಿಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ ವಿದ್ವಾನ್ ರಘುಸುತ ಅವರ ಕೃತಿ-ಭಾರತೀಯ ಸ್ಮೃತಿಗಳು. ಈ ಕೃತಿಯು ನೀತಿಪ್ರದ, ಬೋಧಪ್ರದವಾಗಿದೆ. ಸ್ಮೃತಿಗಳು ಮಾನವನ ದಿನನಿತ್ಯದ ಚಟುವಟಿಕೆಗಳ ಮಾರ್ಗದರ್ಶಿಗಳು. ವ್ಯಕ್ತಿಯೊಬ್ಬನ ಸಾಮಾಜಿಕ ಜೀವನಕ್ಕೆ, ಗಂಡು-ಹೆಣ್ಣಿನ ಸಂಬಂಧ, ಶಿಕ್ಷಣ, ನಡಾವಳಿಕೆ, ಹಿರಿ-ಕಿರಿಯರ ಹೊಣೆಗಾರಿಕೆಗಳು, ಕರ್ತವ್ಯ, ವ್ಯಕ್ತಿಗತ ಬದುಕಿನ ಸ್ವಚ್ಛತೆ ಹೀಗೆ ಕ್ರಮಬದ್ಧ ಬದುಕಿಗೆ ಅತ್ಯಾವಶ್ಯಕಗಳು ಎಂದು ಅಂದಿನ ಸಾಮಾಜಿಕ ವ್ಯವಸ್ಥೆ ಕಂಡುಕೊಂಡಿತ್ತು. ಮನುಸ್ಮೃತಿಯ ಕನ್ನಡಾನುವಾದ ಹೊರತುಪಡಿಸಿದರೆ ಇತರೆ ಸ್ಮೃತಿಗಳು ಕನ್ನಡಕ್ಕೆ ಅನುವಾದಗೊಂಡಿರುವುದು ಕಡಿಮೆ. ಆದ್ದರಿಂದ, ಭಾರತೀಯ ಸ್ಮೃತಿಗಳು ಶೀರ್ಷಿಕೆಯಡಿ ಸ್ಮೃತಿಗಳ ಅನುವಾದ ಕಾರ್ಯ ಕೈಗೊಂಡಿರುವುದಾಗಿ ಲೇಖಕರು ಹೇಳಿದ್ದಾರೆ. ಕೃತಿಯಲ್ಲಿ ಹಿಂದೂ ಧರ್ಮದ ಆಧಾರಗಳು, ಧರ್ಮ-ಶಾಸ್ತ್ರ, ಭಾರತೀಯ ಧರ್ಮಸೂತ್ರಗಳು ಈ ಕುರಿತು ಸುರ್ದೀರ್ಘವಾದ ಲೇಖನಗಳು ಒಳಗೊಂಡಂತೆ 36 ಸ್ಮೃತಿಗಳ ವಿವರಣೆ ಇಲ್ಲಿದೆ.
©2024 Book Brahma Private Limited.