‘ಅಭಿಗರ ಚೌಡಯ್ಯನವರ ವಚನಗಳು’ ಕೃತಿಯು ಸಿ.ಕೆ ನಾವಲಗಿ ಅವರ ಕೃತಿಯಾಗಿದೆ. ಅಂಬಿಗರ ಚೌಡಯ್ಯನವರು ಬಸವ ಸಮಕಾಲೀನ ದಿಟ್ಟಶರಣರು. ಹೆಸರೇ ಸೂಚಿಸುವಂತೆ ಮೀನು ಹಿಡಿಯುವುದು ಮತ್ತು ದೋಣಿ ನಡೆಸುವುದು ಅವರ ಕಾಯಕ. ವಚನಕಾರರಲ್ಲಿ ಪ್ರಮುಖರಾದ ಇವರು ಶ್ರೇಷ್ಠ ಅನುಭಾವಿಯಾಗಿ ತಮ್ಮ ವ್ಯಕ್ತಿ ವೈಶಿಷ್ಟ್ಯವನ್ನು ತೋರ್ಪಡಿಸಿಕೊಂಡವರು. ಇವರ ವಚನಗಳ ಭಾಷೆ ಸರಳ. ಇವರದು ನೇರನುಡಿ, ಚೌಡಯ್ಯನವರು ಶೋಷಿತ ವರ್ಗದಿಂದ ಬಂದವರಾದುದರಿಂದ ಸಾಮಾಜಿಕ ಚಿಂತನೆಯನ್ನು ವ್ಯಾಪಕವಾಗಿ ಮಾಡಿದ್ದಾರೆ, ಆಗಲೇ ದೊರೆತ ಇವರ 300 ವಚನಗಳಲ್ಲಿ ಬಹುತೇಕ ವಚನಗಳು ಕೆಳವರ್ಗದ ಬಂಡಾಯ ಮನೋಧರ್ಮವನ್ನೇ ಬಿಂಬಿಸುತ್ತವೆ ಎಂದಿದೆ. ಪ್ರಸ್ತುತ “ಅಂಬಿಗರ ಚೌಡಯ್ಯನವರ ವಚನಗಳು” – ಚೌಡಯ್ಯನವರ ಸಾಮಾಜಿಕ ಚಿಂತನೆಯನ್ನೊಳಗೊಂಡ 151 ವಚನಗಳನ್ನು ಆಯ್ದು ಸಂಗ್ರಹಿಸಿ ಜನಸಾಮಾನ್ಯರಿಗಾಗಿ ರೂಪಿಸಿದ ವಚನ ಸಂಕಲನ ಗ್ರಂಥ, ಪ್ರತಿ ವಚನದ ಸಂಕ್ಷಿಪ್ತ ವ್ಯಾಖ್ಯಾನದೊಂದಿಗೆ ಕಠಿಣ ಪದಗಳಿಗೆ ಅರ್ಥ ಕೂಡ ನೀಡಲಾಗಿದೆ.
©2024 Book Brahma Private Limited.