ಆಧುನಿಕ ಜಾನಪದ

Author : ನಾಗಭೂಷಣ ಬಗ್ಗನಡು

Pages 224

₹ 140.00




Year of Publication: 2014
Published by: ಶ್ರೀ ಅನ್ನಪೂರ್ಣ ಪ್ರಕಾಶಕರು ಮತ್ತು ವಿತರಕರು
Address: #133, ಮೊದಲಹಂತ ಭಾರತೀಪುರ, ಸೋಂಪುರ ಹೋಬಳಿ ನೆಲಮಂಗಲ ತಾಲ್ಲೂಕು , ಬೆಂಗಳೂರು ಗ್ರಾಮಾಂತರ ಜಿಲ್ಲೆ-562111

Synopsys

‘ಆಧುನಿಕ ಜಾನಪದ’ ಎಂಬುದು ನಾಗಭೂಷಣ ಬಗ್ಗನಡು ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಸಂಶೋಧನಾ ಪ್ರಬಂಧದ ಪ್ರಕಟಿತ ಕೃತಿ. ನಗರ ಜಾನಪದ, ಆಡುಮಾತಿನ ಜಾನಪದ, ಸಮೂಹ ಜಾನಪದ, ವಾಹನ ಜಾನಪದ, ಲಿಖಿತ ಜಾನಪದ, ಪರಿಸರ ಜಾನಪದ ಹೀಗೆ ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ವೊದಲ ಮತ್ತು ಎರಡನೇ ಅಧ್ಯಾಯಗಳಲ್ಲಿ ಜಾನಪದ ಚಿಂತನಾ ಕ್ರಮಗಳು, ಆಧುನಿಕ ಯುಗದಲ್ಲಿ ಜಾನಪದ ಪಡೆದುಕೊಳ್ಳುತ್ತಿರುವ ಬದಲಾದ ಸ್ವರೂಪ, ನಗರ ಜಾನಪದ, ನಗರ ಜನರ ಧಾರ್ಮಿಕ ನಂಬಿಕೆಗಳು, ಸಾಂಸ್ಕೃತಿಕ ಆಚರಣೆಗಳು. ವೈಯಕ್ತಿಕ ನಂಬಿಕೆಗಳನ್ನು ವಿವರಿಸಲಾಗಿದೆ. ಸಮೂಹ ಮಾಧ್ಯಮ ಮತ್ತು ಜಾನಪದ, ಪತ್ರಿಕೋದ್ಯಮ ಮತ್ತು ಜಾನಪದ, ಚಲನಚಿತ್ರಗಳಲ್ಲಿ ಜನಪದ ಭಾಷೆ, ದೂರದರ್ಶನದಲ್ಲಿ ಪರಿಸರ ಜಾನಪದ, ಕಾಮ-ಪ್ರೇಮ ಪ್ರಚೋದಿತ ಜಾನಪದ ಬರಹಗಳು ಮುಂತಾದ ವಿಷಯಗಳನ್ನು ವಿಶ್ಲೇಷಿಸಲಾಗಿದೆ.

 

About the Author

ನಾಗಭೂಷಣ ಬಗ್ಗನಡು
(01 June 1976)

ಸಂಶೋಧಕ, ಲೇಖಕ ನಾಗಭೂಷಣ ಬಗ್ಗನಡು ಅವರು ಮೂಲತಃ ತುಮಕೂರಿನ ದೊಡ್ಡೇನಹಳ್ಳಿ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ‘ಬದಲಾಗುತ್ತಿರುವ ಆಧುನಿಕ ಪರಿಸರದಲ್ಲಿ ಜಾನಪದ’ ಪ್ರಬಂಧ ಮಂಡಿಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವೀಧರರು. ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.   ಬಂಡಾಯ ಚಳವಳಿ, ತಳ ಸಮುದಾಯಗಳ ಹಕ್ಕುಗಳ ಹೋರಾಟ, ಜನಪರ ಚಳವಳಿಗಳಲ್ಲಿ ಸಕ್ರಿಯರು. ಇವರ ಮೊದಲ ಕೃತಿ ‘ಆಧುನಿಕ ಜಾನಪದ’. ಕಡಕೋಳ ಮಡಿವಾಳಪ್ಪ, ಸುಡುಗಾಡು ಸಿದ್ಧರು, ಕಾಲುದಾರಿ, ಬೆಂಕಿ ಬೆಳಕು, ಲಂಕೇಶ್ ಒಂದು ನೆನಪು ಹಾಗೂ ಸಂಶೋಧನಾ ಕೃತಿಗಳು: ವೃತ್ತಿ ರಂಗಭೂಮಿ ನಾಟಕಗಳಲ್ಲಿ ಅಸ್ಪೃಷ್ಯತೆ ಮತ್ತು ದಲಿತತ್ವದ ನೆಲೆಗಳು, ದಲಿತ ಪುರಾಣಗಳು.  ...

READ MORE

Related Books