‘ವಚನ ವೈವಿಧ್ಯ’ ವಿವೇಕಾನಂದ ಸಜ್ಜನ ಅವರ ಸಂಶೋಧನಾತ್ಮಕ ಲೇಖನಗಳ ಸಂಕಲನ. ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರದ ವಿಶೇಷ ಅನುದಾನಕ್ಕೆ ಪಾತ್ರವಾಗಿದೆ. ಸೃಜನಶೀಲತೆಗೆ ಜೊತೆ ಜೊತೆಯಾಗಿ ವಿಮರ್ಶೆ ಹಾಗೂ ಸಂಶೋಧನೆ ಬೆಳೆಯದಿದ್ದರೆ ಸಾಹಿತ್ಯವನ್ನು ನೋಡುವ ಒಂದು ಕಣ್ಣು ಮಂದವಾದಂತೆಯೇ.
ಈ ಕೃತಿಯಲ್ಲಿ ಲೇಖಕರು ಕೆಲವೊಂದು ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಕನ್ನಡ ಕವಿಗಳ ರೂಪಾಂತರ ಪ್ರಜ್ಞೆ. ರಾಮಚಂದ್ರ ಚರಿತ ಪುರಾಣದ ಮೇಲೆ ಅನೇಕಾಂತವಾದದ ಪ್ರಭಾವ, ಶ್ರುತಕೀರ್ತಿಯ ವಿಜಯ ಕುಮಾರಿ ಚರಿತೆಯಲ್ಲಿ ಬಸವ- ಒಂದು ವಿಶ್ಲೇಷಣೆ ಈ ಲೇಖನಗಳು ಕನ್ನಡ ಸಾಹಿತ್ಯವನ್ನು ಮೊದಲ ಬಾರಿಗೆ ಪ್ರವೇಶ ಪಡೆಯುತ್ತಿರುವ ವಿಷಯಗಳನ್ನಿಟ್ಟುಕೊಂಡಿವೆ ಎಂಬುದು ವಿವೇಕಾನಂದರ ವಿಮರ್ಶೆಯು ಹೊಸದಾರಿಯನ್ನು ಅರಸುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ.
ಈ ಕೃತಿಯಲ್ಲಿ ಸಮತೋಲನ, ಸಮಯ ಪ್ರಜ್ಞೆ ಸಮಾಜಕ್ಕೆ ಕೇಡಿಲ್ಲದಂತೆ ವಿಮರ್ಶಿಸುವ ಎದೆಗಾರಿಕೆ, ವ್ಯಕ್ತಿಗಿಂತ ಸಮಾಜ ಮುಖ್ಯವೆಂದು ಬಗೆಯುವ ಅಂತರ್ ಪ್ರಜ್ಞೆಗಳನ್ನು ವಿಮರ್ಶಕರು ಅಳವಡಿಸಿಕೊಳ್ಳಲು ಪ್ರತ್ನಿಸಿದ್ದಾರೆ.
©2024 Book Brahma Private Limited.