ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ಹಲವು ನಮೂನೆಯ ಭಜನೆ ಹಾಡುಗಳನ್ನು ಒಂದೆಡೆ ಸಿಗುವಂತೆ ಮಾಡಿದ್ದಾರೆ ಲೇಖಕ ಸಿ.ಕೆ. ನಾವಲಗಿ. ಈ ಕೃತಿಯಲ್ಲಿ ಪುರಂದರದಾಸರ ಹಾಗೂ ಕನಕದಾಸರ ಕೀರ್ತನೆಗಳು, ನಿಜಗುಣ ಶಿವಯೋಗಿಗಳ ಕೈವಲ್ಯಗಳು, ಶಿಶುನಾಳ ಶರೀಫರ ತತ್ವಪದಗಳು, ಕಡಕೋಳ ಮಡಿವಾಳಪ್ಪನವರ ತತ್ವಪದಗಳು, ನಿಜಲಿಂಗ ಭದ್ರೇಶ್ವರ ‘ಅನುಭವ ಪದಗಳು’, ಚನ್ನಮಲ್ಲಯ್ಯನ ಭಜನೆ ಹಾಡುಗಳು, ಬಂಡೆಪ್ಪ ಕವಿಯ ಭಜನೆ ಹಾಡುಗಳು, ಪರಮಹಂಸ ಸದ್ಗುರು ಶಾಮಾನಂದರ ಕೈವಲ್ಯಾಮೃತ, ಸಿದ್ಧಗಿರಿಸ್ವಾಮಿ ಮಠಪತಿಯವರ ಗಿರೀಶ ಗೀತೆ ಶತಕ, ಶ್ರೀ ಮುದ್ದಯ್ಯ ಹಿರೇಮಠ ಅವರ ಭಜನಾ ಪದಗಳು, ಇಬ್ರಾಹೀಮ. ಸುತಾರ ಅವರ ಪರಮಾರ್ಥಲಹರಿ, ಶ್ರೀ ಬಾಳೇಸ ಚಿಕ್ಕಣ್ಣನವರ ‘ಕೈವಲ್ಯ ಕಾಮಧೇನು, ಶ್ರೀ ಶಂಕರಾನಂದಸ್ವಾಮಿ ಯರಗಲ್ ಮಠ ಅವರ ಕಾವ್ಯಲಹರಿ, ಶ್ರೀ ನಿಜಗುಣದೇವರ ಕೈವಲ್ಯ ಕಲ್ಪತರು ಹೀಗೆ ಭಜನೆ ಹಾಡುಗಳ ರಾಶಿಯೇ ತುಂಬಿರುವುದು ಈ ಕೃತಿಯ ವೈಶಿಷ್ಟ್ಯ. ಕರ್ನಾಟಕ ಸರ್ಕಾರದ ಸಮಗ್ರ ಜಾನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟಗೊಂಡಿದೆ.
©2024 Book Brahma Private Limited.