ಕನ್ನಡದ ಪ್ರಾಚೀನ ಕಾವ್ಯಗಳನ್ನು ಗಮಕದಲ್ಲಿ ವಾಚಿಸಿ ವ್ಯಾಖ್ಯಾನ ಮಾಡಿ ನೂರಾರು ಹಳ್ಳಿಗಳ ಸಹಸ್ರಾರು ಸಹೃದಯರನ್ನು ದಶಕಗಳ ಕಾಲ ರಂಜಿಸಿದವರು ಆರ್.ವಿ. ಶ್ರೀನಿವಾಸಯ್ಯನವರು (ಜ. 1910). ಅವರು ರಚಿಸಿದ ಹಲವು ಕೃತಿಗಳಲ್ಲಿ ನಾಶವಾಗದೆ ಉಳಿದುಕೊಂಡುದು ಮುದ್ದಣನ ಅದ್ಭುತರಾಮಾಯಣದ ಪದ್ಯರೂಪವಾದ ಈ ಕೃತಿ ಮಾತ್ರ (ರಚನೆ 1986). ಪ್ರಾಚೀನ ಕಾವ್ಯಮಾರ್ಗದ ಅಪರೂಪದ ಪ್ರಯತ್ನ. ರಸಸ್ಥಾನಗಳನ್ನೂ ನಿರ್ಮಿಸಿದ್ದಾರೆ. ಸೀತಾದೇವಿಯ ಮಹಿಮೆ ಚೆನ್ನಾಗಿ ಪ್ರಕಟವಾಗಿದೆ. ಗದ್ಯಸಾರವನ್ನು ಒದಗಿಸಿದ್ದಾರೆ. ವಿವೇಕ, ವಿನಯ, ಸತ್ಯನಿಷ್ಠೆ, ಭಗವದ್ಭಕ್ತಿ ಮೊದಲಾದ ಜೀವನದ ಶಾಶ್ವತ ಮೌಲ್ಯಗಳನ್ನು ಮನವರಿಕೆ ಮಾಡಿಕೊಡುವ ಕೃತಿ ಎಂಬುದು ವಿಮರ್ಶಕರ ಅಭಿಪ್ರಾಯ.ಈ ಕೃತಿಯನ್ನು ಪಣತಾರ್ತಿಹರನ್ ಸಂಪಾದಿಸಿದ್ದಾರೆ.
©2024 Book Brahma Private Limited.