ಪು.ತಿ.ನ. ಅವರು ರಚಿಸಿರುವ ಕೃತಿ ಶ್ರೀಹರಿಚರಿತೆ. ಲೇಖಕರು ಈ ಕುರಿತು ಬರೆಯುತ್ತಾ, ಶ್ರೀಮದ್‌ಭಾಗವತದ ಶ್ಲೋಕವೊಂದರಿಂದ ಶ್ರೀಹರಿಚರಿತೆ ಎಂಬ ಕಾವ್ಯವನ್ನು ರಚಿಸಲು ಪ್ರೇರಣೆ ಆಯಿತು. ಶ್ರೀ ಕೃಷ್ಣನು ನನ್ನ ಆತ್ಮಕ್ಕೆ ತುಂಬ ಹತ್ತಿರದ ದೇವರು. ನಿರಂತರವಾಗಿ ಆತನನ್ನು ನೆನೆಯುವುದು ನನಗೆ ಸ್ವಭಾವವಾಗಿ ಬಿಟ್ಟಿದೆ. ಗೋಕುಲಾಷ್ಟಮಿ ಎಂಬ ಪ್ರಬಂಧದಲ್ಲಿ, ಮಳೆಯು ನಾಡ ತೊಯ್ಯುತಿರೆ ಎಂಬ ಪದ್ಯದಲ್ಲಿ ಗೋಕುಲ ನಿರ್ಗಮನ ಎಂಬ ಗೀತರೂಪದಲ್ಲಿ ದೀಪಲಕ್ಷ್ಮಿ ಎಂಬ ಹಾಡುಗಬ್ಬದಲ್ಲಿ, ಗೀತೆಯ ಕನ್ನಡ ಪದ್ಯಾನುವಾದದಲ್ಲಿ, ಇನ್ನು ಇತರೆಡೆಗಳಲ್ಲಿ ಕೃಷ್ಣನನ್ನು ನೆನೆದಿದ್ದೇನೆ ಎಂದಿದ್ದಾರೆ.
ಶ್ರೀಹರಿಚರಿತೆಯು ಪ್ರಣಾಮಂ, ಅಭಯಪ್ರದಾನಂ, ಜನನೀಜನಕ ಸಂಸ್ಕಾರಂ, ಸದವತಾರಂ, ಗೋಕುಲ ಗಮನಂ, ವಜ್ರಗಮನಂ, ಶೈಶವಲೀಲಾಲೋಕನಂ, ವಿಪಿನಾವಗಾಹನಂ, ಭಾಂಡೀರ ದರ್ಶನ, ವರ್ಷಾವಗಾಹಂ, ವೇಣುಗಾನಾವತರಣಂ, ವೇಣುಗಾನ ತರಂಗಿಣೀ ಪ್ಲಾವನಂ, ರಾಧಾ ದರ್ಶನಂ, ರಾಧಾಕೃಷ್ಣ ಸಂಗತಿ, ಕಾಳಿಂಗ ಹ್ರದಪ್ರವೇಶಂ, ಕಾಳಿಂಗ ಮರ್ದನಂ, ಇಂದ್ರಪರ್ವ ಸಂರಂಭಂ, ಗೋವರ್ಧನ ಪರ್ವಂ, ಗೋವರ್ಧನೋದ್ಧರಣಂ, ಗೋವಿಂದ ಪಟ್ಟಾಭಿಷೇಕಂ, ನವನಿರ್ಮಾಣಂ, ಜನ್ನಿಗವೆಂಡಿರೌತಣಂ, ಪ್ರಲಂಬ ವಧಂ, ರಾಸಾರಂಭಂ, ಗೋಪಿಕಾ ವಿಲಾಪಂ, ರಾಸಕ್ರೀಡೆ, ವೇಣುತ್ಯಾಗಂ, ರಾಧಾನಿರ್ವೇದಂ, ಗೋಕುಲ ಪ್ರಸ್ಥಾನಂ, ಯಶೋದಾವತ್ಸನಿಗೆ ಜಯಮಂಗಳಂ, ನಿವೇದನಂ ಹೀಗೆ ವಿವಿಧ ಪಠ್ಯಗಳಿವೆ.
©2024 Book Brahma Private Limited.