ಅತ್ತ ಪಾಶ್ಚಾತ್ಯರ ಪದ್ಧತಿಗೂ ದೃಢಮೂಲಗಳನ್ನು ತತ್ತ್ವಶಾಸ್ತ್ರದಿಂದ ಅರಿಯಲು ಯತ್ನಿಸದೆ, ಕಾವ್ಯ, ವಿಮರ್ಶೆ, ತತ್ತ್ವಶಾಸ್ತ್ರಗಳ ಸಂಬಂಧವನ್ನೇ ಅಲ್ಲಗಳೆಯುತ್ತ ಬೇರಿಲ್ಲದ ಅಲೆಮಾರಿ ಎನ್ನಬಹುದಾದ ಮನೋಧರ್ಮದ (ಏನೂ ಗೊತ್ತಿಲ್ಲದೆಯೂ ಎಲ್ಲಾ ಗೊತ್ತಿದೆ ಎಂದು ಸೋಗು ಹಾಕುವ dilettante ಎಂದು ಕರೆಯಲ್ಪಡುವ) ಒಂದು ಮೋಹಿನೀ ಚಾಲದ ಕನ್ನಡ ವಿಮರ್ಶಕರ ನಾಯಿಕೊಡೆಗಳು ಹುಲುಸಾಗಿ ಬೆಳೆಯುತ್ತಾ ತಮಗೆ ಮೆಚ್ಚಿಗೆಯಾದ ಸಮಕಾಲೀನರನ್ನು ಇಂದ್ರ ಚಂದ್ರ ರಂದು ಹೊಗಳಲು ಏನೇನು ಬೇಕೋ ಆ ಮಾನದಂಡಗಳನ್ನು ವಿಶ್ವಾಮಿತ್ರ ಸೃಷ್ಟಿಯಲ್ಲಿ ಹುಟ್ಟಿಸುತ್ತಾ, ತಮಗೆ ಬೇಡವಾದ ಸಮಕಾಲೀನರನ್ನು ತೆಗಳಲು ಏನು ಬೇಕೋ ಅಂಥ ತಾಂಬರ ಮಾಯಿಗಳನ್ನು ಆಕಾಶದಿಂದ ಉದುರಿಸುತ್ತಾ, ಸಾಹಿತ್ಯದಲ್ಲಿ ಕಾಣಬೇಕಾದುದನ್ನು ಬೆಳೆಗಟ್ಟಬೇಕಾದುವನ್ನು ಅರಿಯಲು, ಕಾಣಲು, ಜೀವನಾನುಭವ, ಪ್ರಾಮಾಣಿಕತೆ, ವಿಸ್ತಾರ ಓದು, ಹೃದಯ ಶುದ್ಧಿ ಇಂಥ ಏನನ್ನೂ ಹೊಂದದೆಯೇ ಸಮಯಸಾಧಕ ರೀತಿಯಲ್ಲಿ ಹೊಸ ಹೊಸ ಶಬ್ದ ಜಾಲಗಳನ್ನು ಸೃಷ್ಟಿಸುತ್ತಾ, ಅವು ಏನೆಂದು ಕೇಳಿದವರಿಗೆ, ಉತ್ತರಿಸದೆ, ಅವರನ್ನೇ ದಡ್ಡರೆಂದು ಪಟ್ಟಗಟ್ಟಿ ಬರೆಯುತ್ತಾ, ಯಾರಿಗೂ ತಿಳಿಯದಂತೆ ಬರೆಯುವುದೇ ಉತ್ತಮ ವಿಮರ್ಶೆಯ ಲಕ್ಷಣವೆಂದು ಒಂದು ಕೃತಕ ಮಾನದಂಡವನ್ನು ಉದ್ಧರಿಸಿ. ಈ ಮಾನದಂಡವು ಪ್ರಾಚೀನ, ಆರ್ವಾಚೀನ ಯಾವ ಕಾವ್ಯಗಳಿಗೂ ಬಾಹಿರವಾಗಿರುವಂತೆ ಎಚ್ಚರವಹಿಸಿ, ಅದನ್ನೇ ನಂಬಿ ಬರೆಯುವ ಒಂದು ಹಿಂದು ಮುಂದ ಪುಡಿ ವಿಮರ್ಶಕರ ಸೇನೆಯ ಬೆಳೆದಿತ್ತು ಎಂಬುದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.
©2024 Book Brahma Private Limited.